Asianet Suvarna News Asianet Suvarna News

Raj Thackeray: NDA ಜೊತೆ ಮೈತ್ರಿ ಮಾಡಿಕೊಳ್ತಾರಾ ರಾಜ್‌ ಠಾಕ್ರೆ..? ಮಹಾರಾಷ್ಟ್ರದಲ್ಲಿ MNS ಜೊತೆ ಬಿಜೆಪಿ ಹೊಂದಾಣಿಕೆ..?

ಮರಾಠಿಗರ ಕಲ್ಯಾಣ ಕುರಿತು MNS ಗೆ ಒಲವು 
NDA ಒಕ್ಕೂಟದ ಕಡೆ ಒಲವು ತೋರಿದ ನಾಯಕ
ಮುಂಬೈನಲ್ಲಿ ಹಿಡಿತ ಸಾಧಿಸಿರುವ MNS ಪಕ್ಷ 
 

ಲೋಕಸಮರ ಗೆಲ್ಲಲು ಬಿಜೆಪಿಯಿಂದ ಭರ್ಜರಿ ರಣತಂತ್ರ ರೂಪಿಸಲಾಗುತ್ತಿದೆ. ಸಾಲು ಸಾಲು ನಾಯಕರನ್ನು ತನ್ನತ್ತ ಎನ್‌ಡಿಎ(NDA) ಸೆಳೆಯುತ್ತಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ರಾಜ್ ಠಾಕ್ರೆಗೆ(Raj Thackeray) ಬಿಜೆಪಿ ಬಲೆ ಬೀಸಿದೆ. ಬಿಜೆಪಿಯ(BJP) ಆಶಿಶ್ ಶೆಲಾರ್(Ashish shelar) ರಾಜ್ ಠಾಕ್ರೆ ಭೇಟಿಯಾಗಿದ್ದಾರೆ. ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ  ರಾಜ್ ಠಾಕ್ರೆ ನಿವಾಸದಲ್ಲಿ ಭೇಟಿಯಾಗಿದ್ದಾರೆ. NDA ಜೊತೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಮೈತ್ರಿ ಬಗ್ಗೆ ಮೌನಮುರಿಯದ ಬಿಜೆಪಿ ಮತ್ತು MNS ಪಕ್ಷದ ನಾಯಕರು. ಗೆಳೆಯರಾಗಿರೋ ಕಾರಣ ರಾಜ್ ಠಾಕ್ರೆ ಜತೆ ಚರ್ಚೆ ನಡೆಸಿದ್ದೇನೆ. ಸಮಯ ಬಂದಾಗ ಎಲ್ಲವನ್ನೂ ತಿಳಿಸಲಾಗುವುದು ಎಂದ ಆಶಿಶ್ ಶೆಲಾರ್ ಹೇಳಿದ್ದಾರೆ. ಮೈತ್ರಿ ಮಾತುಕತೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ನಾಯಕರು.

ಇದನ್ನೂ ವೀಕ್ಷಿಸಿ:  ಆಂಧ್ರದಲ್ಲಿ ಬಿಜೆಪಿ-ಟಿಡಿಪಿ-ಜನಸೇನಾ ಮೈತ್ರಿ ಫೈನಲ್..? ಜಗನ್‌ಮೋಹನ್ ರೆಡ್ಡಿಗೆ ಬಿಗ್ ಶಾಕ್..!

Video Top Stories