ಆಂಧ್ರದಲ್ಲಿ ಬಿಜೆಪಿ-ಟಿಡಿಪಿ-ಜನಸೇನಾ ಮೈತ್ರಿ ಫೈನಲ್..? ಜಗನ್‌ಮೋಹನ್ ರೆಡ್ಡಿಗೆ ಬಿಗ್ ಶಾಕ್..!

ಟಿಡಿಪಿಯ ಚಂದ್ರಬಾಬು ನಾಯ್ಡು ಜೊತೆ ಮೈತ್ರಿಗೆ ಒಪ್ಪಿಗೆ
ಇಂದು ನವದೆಹಲಿಯಲ್ಲಿ ಅಧಿಕೃತ ಘೋಷಣೆ ಸಾಧ್ಯತೆ
ಸೀಟು ಹಂಚಿಕೆ ಚರ್ಚೆ ಮಾಡುತ್ತಿರೋ ಎನ್ಡಿಎ ನಾಯಕರು

First Published Feb 20, 2024, 12:13 PM IST | Last Updated Feb 20, 2024, 12:13 PM IST

ಆಂಧ್ರಪ್ರದೇಶದಲ್ಲೂ ತನ್ನ ಪ್ರಭಾವ ಬೀರಿರುವ ಕೇಸರಿ ಪಡೆ. ಶತ್ರುವಿನ ಶತ್ರು ಮಿತ್ರ ಎಂಬ ಮಾತು ಪಾಲನೆ ಮಾಡ್ತಿದೆ. ಜಗನ್ ಮೋಹನ್ ರೆಡ್ಡಿ(Jagan Mohan Reddy) ವಿರುದ್ಧ ದೋಸ್ತಿ ಮಾಡಿಕೊಂಡ ಕೇಸರಿ ಪಡೆ, ಹಳೇ ಮಿತ್ರ ಚಂದ್ರಬಾಬು ನಾಯ್ಡುವನ್ನ(Chandrababu Naidu) ಮತ್ತೆ ಮೈತ್ರಿ ಮಾಡಿಕೊಳ್ಳುವ ಹೆಜ್ಜೆ ಇಟ್ಟಿದೆ. ಹಳೇ ಸ್ನೇಹಿತನಿಗೆ ಬಿಜೆಪಿ ಹೈಕಮಂಡ್‌ ಮಣೆ ಹಾಕಿದೆ. ಬಿಜೆಪಿ(BJP) ನಾಯಕರನ್ನ ಚಂದ್ರಬಾಬು ನಾಯ್ಡು- ಜಗನ್ ಮೋಹನ್‌ ರೆಡ್ಡಿ ಭೇಟಿ ಮಾಡಿದ್ದಾರೆ. ಒಂದೇ ದಿನದ ಅಂತರದಲ್ಲಿ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆದಿದೆ. ಮೈತ್ರಿಗೆ ಉಭಯ ಪಕ್ಷಗಳ ನಾಯಕರು ಒತ್ತಾಯಿಸಿದ್ದರು. ಆಂಧ್ರ ಪ್ರದೇಶದಲ್ಲಿ(Andrapradesh) ವಿಧಾನಸಭೆ-ಲೋಕಸಭೆ ಚುನಾವಣೆ ನಡೆಯಲಿದೆ. ಎರಡು ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದು, ವಿಧಾನಸಭೆಯಲ್ಲಿ 20 ಸೀಟಿಗೆ ಬಿಜೆಪಿ ಬೇಡಿಕೆ ಇಟ್ಟಿದೆ. ಲೋಕಸಭೆಯಲ್ಲಿ 6 ಸೀಟು ನೀಡುವಂತೆ ಬಿಜೆಪಿ ಬೇಡಿಕೆಯಾಗಿದೆ. ಫೆಬ್ರವರಿ 20ರೊಳಗೆ ಸೀಟು ಹಂಚಿಕೆ ಮಾತುಕತೆ ಫೈನಲ್ ಆಗಲಿದೆ. ಇಂದು ಅಧಿಕೃತವಾಗಿ ಎನ್‌ಡಿಎ(NDA) ಸೇರ್ಪಡೆಯಾಗಲಿರೋ ಟಿಡಿಪಿ.

ಇದನ್ನೂ ವೀಕ್ಷಿಸಿ:  ವಿನಯ್ ಬಿದರೆಗೆ ಸಿಗುತ್ತಾ ತುಮಕೂರು ಬಿಜೆಪಿ ಟಿಕೆಟ್..? ಟಿ.ಬಿ.ಜಯಚಂದ್ರ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಸಿಎಂ !

Video Top Stories