Asianet Suvarna News Asianet Suvarna News

ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

ಗುಜರಾತ್ ಗೆಲುವು..ಮೋದಿ ಸೋಲು..ಇದು ರಾಹುಲ್ ಶಪಥ..!
ಅಯೋಧ್ಯೆಯಲ್ಲಿ ಆಗಿದ್ದೇನು..?ಗುಜರಾತ್‌ನಲ್ಲಿ ಆಗೋದೇನು..?
ಗುಜರಾತ್ ಕಾಂಗ್ರೆಸ್‌ ವಶಕ್ಕೆ ಸಿದ್ಧವಾಗಿದೆಯಾ ನಿಗೂಢ ವ್ಯೂಹ..?

First Published Jul 8, 2024, 5:33 PM IST | Last Updated Jul 8, 2024, 5:33 PM IST

ಗುಜರಾತ್  ಗೆದ್ದೇ ಗೆಲ್ತೀವಿ..ಬಿಜೆಪಿ (BJP)ಹಾಗೂ ಮೋದಿನಾ ಸೋಲಿಸೇ ಸೋಲುಸ್ತೀವಿ. ಇದು ಕಾಂಗ್ರೆಸ್(Congress) ಯುವರಾಜ ರಾಹುಲ್ ಗಾಂಧಿ (Rahul Gandhi) ಮಾಡಿರೋ ಶಪಥ. ಅಯೋಧ್ಯೆಲಿ ಏನಾಗಿತ್ತೋ, ಅದೇ ಗುಜರಾತ್‌ನಲ್ಲಿ ರಿಪೀಟ್ ಆಗತ್ತೆ ಅಂತಿದ್ದಾರೆ ರಾಹುಲ್ ಗಾಂಧಿ. ರಾಷ್ಟ್ರ ರಾಜಕಾರಣ ಈಗ ಬದಲಾಗಿದೆ. ಕಳೆದ 10 ವರ್ಷಗಳ ತನಕ ಇದ್ದ ವಾತಾವರಣಕ್ಕೂ ಈಗಿರೋ ಪರಿಸ್ಥಿತಿಗೂ ವ್ಯತ್ಯಾಸ ಸುಸ್ಪಷ್ಟವಾಗಿ ಎದ್ದು ಕಾಣ್ತಾ ಇದೆ. ಮತ್ತೆ ಮೋದಿಯೇ (Narendra Modi)ಪ್ರಧಾನಿಯಾಗಿದ್ದಾರೆ. ಮತ್ತೆ ಎನ್‌ಡಿಎನೇ(NDA) ಅಧಿಕಾರ ಹಿಡಿದಿದೆ. ಆದ್ರೆ ಬದಲಾಗಿರೋದು, ಆಡಳಿತಾರೂಢ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ. ಈ ಬಾರಿ ನಮ್ಮ ಕಣ್ಣಿಗೆ ಕಾಣ್ತಾ ಇರೋ ಕಾಂಗ್ರೆಸ್ ತೀರಾ ಭಿನ್ನವಾಗಿದೆ. ಈ ಸಲವೂ ರಾಷ್ಟ್ರದ ಹಿರಿಯ ಪಕ್ಷ ಅಂತ ಗುರ್ತಿಸಿಕೊಳ್ಳೋ ಕಾಂಗ್ರೆಸ್, 100 ಗಡಿ ದಾಟೋಕೆ ಸಾಧ್ಯವಾಗದ ಹಾಗೆ ಕೂತಿದೆ. ಹಾಗಿದ್ದೂ, ಈ ಬಾರಿ ಲೋಕಸಭಾ ಚುನಾವಣಾ ರಣಕಣದಲ್ಲಿ ತನಗೆ ನೈತಿಕ ಗೆಲುವು ದಕ್ಕಿದೆ ಅಂತ ಹೇಳ್ಕೊಳ್ತಾ ಇದೆ. ಇದೇ ಕಾರಣಕ್ಕಾಗಿಯೇ, ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದೊಡ್ಡ ದನಿಯಲ್ಲಿ ಮಾತಾಡುವಂತಾಗಿದೆ. ಕಾಂಗ್ರೆಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗ್ತಾ ಇದೆ. ಆ ಗುಡುಗು ಅಡಗಿಸೋಕೆ, ಪ್ರಧಾನಿ ಮೋದಿ ಕೂಡ ತಯಾರಾಗಿದ್ದಾರೆ. ಗುಜರಾತ್‌ನಲ್ಲಿ ಮೋದಿ ಹಾಗೂ ಬಿಜೆಪಿನಾ ಸೋಲಿಸಿಯೇ ಸೋಲಿಸ್ತೀವಿ. ಇದು ರಾಹುಲ್ ಗಾಂಧಿ ಶಪಥ. ಶತಾಯ ಗತಾಯ ಗುಜರಾತ್ ಗೆಲ್ಲೋ ಕನಸು ಕಾಣ್ತಾ ಇರೋ ಕಾಂಗ್ರೆಸ್ ರಣಘೋಷ ಇದು.

ಇದನ್ನೂ ವೀಕ್ಷಿಸಿ:  ಪತಿಗಾಗಿ ಬಂಡೆ ಮಹಾಕಾಳಿ ಮೊರೆ ಹೋದ ವಿಜಯಲಕ್ಷ್ಮೀ! ಸಾಕ್ಷಿ ನಾಶಕ್ಕೆ ಕರೆಸಿದ ಆ ಮೂವರೇ ಈಗ ದರ್ಶನ್ ಪಾಲಿಗೆ ವಿಲನ್?

Video Top Stories