ಪತಿಗಾಗಿ ಬಂಡೆ ಮಹಾಕಾಳಿ ಮೊರೆ ಹೋದ ವಿಜಯಲಕ್ಷ್ಮೀ! ಸಾಕ್ಷಿ ನಾಶಕ್ಕೆ ಕರೆಸಿದ ಆ ಮೂವರೇ ಈಗ ದರ್ಶನ್ ಪಾಲಿಗೆ ವಿಲನ್?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 200 ಕ್ಕೂ ಹೆಚ್ಚು ಸಾಕ್ಷ್ಯ..!
ಪ್ರತ್ಯಕ್ಷದರ್ಶಿ, ಪರೋಕ್ಷ ಸಾಕ್ಷಿ ಹೊರತುಪಡಿಸಿ 180 ಸಾಕ್ಷ್ಯ..!
ಆರೋಪಿಗಳಿಗೆ ಶಾಕ್..ಪೊಲೀಸರ ಕೈ ಸೇರಿತು FSL ವರದಿ..!

Share this Video
  • FB
  • Linkdin
  • Whatsapp

ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಜೈಲು(Renukaswamy murder case) ಸೇರಿದ್ದಾರೆ. ದಿನಕಳೆದಂತೆ ಈ ಹೈಪ್ರೊಫೈಲ್ ಕೇಸ್ ರೋಚಕ ತಿರುವು ಪಡೆದುಕೊಳ್ತಿದೆ. ಹತ್ಯೆ ತನಿಖೆ ಚುರುಕುಗೊಂಡಿದ್ದು, ದಿನೇ ದಿನೇ ಸಾಕ್ಷ್ಯಗಳು ಸಂಖ್ಯೆ ಹೆಚ್ಚಾಗ್ತಾನೆ ಇದೆ. ಇತ್ತ ಜೈಲುವಾಸ ಅನುಭವಿಸುತ್ತಿರುವ ದರ್ಶನ್ (Darshan) ಬಿಡಿಸಲು ಅವರ ಕುಟುಂಬ ಶತಪ್ರಯತ್ನ ನಡೆಸ್ತಿದೆ. ಇದೇ ವೇಳೆ ಕೊಲೆ ಕೇಸ್‌ನಲ್ಲಿ ದರ್ಶನ್ ಉಳಿಸಲು 2ನೇ ಸುತ್ತಿನ ಪ್ರಯತ್ನ ಶುರುವಾಗಿದ್ದು, ಕುಟುಂಬಸ್ಥರು, ಪ್ರಭಾವಿ ವ್ಯಕ್ತಿಗಳು ಹೈವೋಲ್ಟೇಜ್ ಸಭೆ(Meeting) ನಡೆಸಿದ್ದಾಗಿ ತಿಳಿದುಬಂದಿದೆ. ಅಲ್ಲದೆ ಕಾನೂನು ಹೋರಾಟಕ್ಕೂ ಮುನ್ನ ದರ್ಶನ್‌ಗೆ ಪ್ರಮುಖ ಕಂಡೀಷನ್‌ ಕೂಡ ಇಡಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳು ಜೈಲುಪಾಲಾಗಿದ್ದಾರೆ. ಪೊಲೀಸರು ಈಗಾಗಲೇ ಪಕ್ಕಾ ಸಾಕ್ಷ್ಯಗಳನ್ನ ಕಲೆಹಾಕಿದ್ದು, ಅದ್ರಲ್ಲಿ ಭೌತಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷಿಗಳ ಸಂಖ್ಯೆಯೇ 200ಕ್ಕೂ ಹೆಚ್ಚು ದಾಖಲಾಗಿವೆ. ಹೀಗಾಗಿ ಸದ್ಯಕ್ಕಂತೂ ರಿಲೀಸ್ ಆಗೋ ಸಾಧ್ಯತೆ ಕಡಿಮೆ ಅಂತ ಹೇಳಲಾಗ್ತಿದೆ.ಈ ಎಲ್ಲದರ ಮಧ್ಯೆ ದರ್ಶನ್ ಉಳಿಸಲು ಒಂದು ಹೈವೋಲ್ಟೇಜ್ ಸಭೆ ನಡೆದಿದೆ ಎಂಬ ಸ್ಟೋಟಕ ಸುದ್ದಿ ಹೊರ ಬಿದ್ದಿದೆ.

ಇದನ್ನೂ ವೀಕ್ಷಿಸಿ: ದರ್ಶನ್‌ ಗ್ಯಾಂಗ್‌ಗೆ ಕಂಟಕವಾಗುತ್ತಾ 'ಆ' 2 ಪೆನ್‌ ಡ್ರೈವ್‌? ಪೊಲೀಸರು ಸಿದ್ಧಪಡಿಸಿರುವ ಇದರಲ್ಲಿ ಏನಿದೆ ?

Related Video