Rahul Gandhi: ಏ. 17ರಂದು ರಾಜ್ಯಕ್ಕೆ ರಾಹುಲ್ ಗಾಂಧಿ: ಕೋಲಾರದಲ್ಲಿ ಬೃಹತ್ ಸಮಾವೇಶ, ಒಗ್ಗಟ್ಟು ಪ್ರದರ್ಶನಕ್ಕೆ ತಯಾರಿ

ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ತಯಾರಿ
ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾದಂತೆ ಶಾಸಕರಿಗೆ ' ಕೈ'ಸೂಚನೆ
ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ಒಟ್ಟುಗೂಡಿಸಲು ಸಿದ್ಧತೆ

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ(Narendra Modi) ಭೇಟಿ ಬೆನ್ನಲ್ಲೇ ರಾಹುಲ್ ರಾಜ್ಯ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 17ರಂದು ರಾಜ್ಯಕ್ಕೆ ರಾಹುಲ್ ಗಾಂಧಿ(Rahul Gandhi) ಆಗಮಿಸಲಿದ್ದಾರೆ. ಕೋಲಾರದಲ್ಲಿ(Kolar) ರಾಹುಲ್ ಗಾಂಧಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಕೋಲಾರ ನಾಯಕರ ಭಿನ್ನಮತದ ನಡುವೆಯೂ ಸಮಾವೇಶಕ್ಕೆ ತೀರ್ಮಾನ ಮಾಡಲಾಗಿದೆ. ಶತಾಯಗತಾಯ ಕೋಲಾರವನ್ನು ಮರಳಿ ಪಡೆಯಲು ರಾಹುಲ್ ಗಾಂಧಿ ಪ್ಲ್ಯಾನ್‌ ಮಾಡಿದಂತೆ ಕಾಣುತ್ತಿದೆ. ಒಂದೊಂದು ಕ್ಷೇತ್ರವನ್ನೂ ಕಾಂಗ್ರೆಸ್‌ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾಲೂರು ತಾಲೂಕಿನ ಚೊಕಂಡಹಳ್ಳಿ ಬಳಿ ಸಮಾವೇಶ ಆಯೋಜನೆ ಮಾಡಲಾಗಿದ್ದು, ಇದುವರೆಗೂ ಕೋಲಾರ ‘ಕೈ’ ಅಭ್ಯರ್ಥಿ ಪರ ಪ್ರಚಾರಕ್ಕೆ ಕೆ.ಎಚ್ ಮುನಿಯಪ್ಪ ಮತ್ತು ಪುತ್ರಿ, ಕಾಂಗ್ರೆಸ್ ಶಾಸಕಿ ರೂಪಕಲಾ ಸಹ ಗೈರಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಜಲಮಂಡಳಿ ನಿರ್ಲಕ್ಷ್ಯಕ್ಕೆ ಯುವಕ ಬಲಿ: ಬಾಯ್ತೆರೆದು ನಿಂತಿದೆ ಯಮಸ್ವರೂಪಿ ಗುಂಡಿ!

Related Video