ಜಲಮಂಡಳಿ ನಿರ್ಲಕ್ಷ್ಯಕ್ಕೆ ಯುವಕ ಬಲಿ: ಬಾಯ್ತೆರೆದು ನಿಂತಿದೆ ಯಮಸ್ವರೂಪಿ ಗುಂಡಿ!

ವರ್ಷದ ಹಿಂದೆ ಕೂಡ ಒಂದು ಬಲಿ ಪಡೆದಿದ್ದ ಈ ಗುಂಡಿ
ಇದೇ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ವೇಳೆ ಅವಘಡ
ಈಗ ಜಲಮಂಡಳಿ ನಿರ್ಲಕ್ಷಕ್ಕೆ ಮತ್ತೊಬ್ಬ ಯುವಕ ಬಲಿ

Share this Video

ಬೆಂಗಳೂರು: ಜಲಮಂಡಳಿ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದು(Died), ಗುಂಡಿಗೆ ಬಿದ್ದ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕೆಂಗೇರಿಯ ಕೊಮ್ಮಘಟ್ಟ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಸದ್ದಾಂ ಪಾಷಾ ಮೃತ ದುರ್ದೈವಿಯಾಗಿದ್ದಾನೆ. ಉಮ್ರಾನ್ ಮತ್ತು ಮುಬಾರಕ್‌ಗೆ ಗಂಭೀರ ಗಾಯವಾಗಿದೆ. ತಡರಾತ್ರಿ ಒಂದೇ ಬೈಕ್‌ನಲ್ಲಿ(Bike) ಮೂವರು ಬರುತ್ತಿದ್ದರು ಎಂದು ತಿಳಿದುಬಂದಿದೆ. ಹಳ್ಳ ಕಾಣದೆ ನೇರವಾಗಿ ಗುಂಡಿಗೆ(Pothole) ಬೈಕ್‌ನೊಂದಿಗೆ ಯುವಕರು ಬಿದ್ದಿದ್ದಾರೆ. ಗುಂಡಿ ಮುಚ್ಚದ ಜಲಮಂಡಳಿ(BWSSB) ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಂಗೇರಿ‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೈಪ್ ಹಾಕಲು ಹಳ್ಳ ತೆಗೆದು ಬ್ಯಾರಿಕೇಡ್ ಹಾಕಿರುವ ಜಲಮಂಡಳಿ, ಬ್ಯಾರಿಕೇಡ್ ಪಕ್ಕದ ಸಣ್ಣ ಜಾಗದಲ್ಲಿ ಒಳಗೆ ಯುವಕರು ಬಂದಿದ್ದರು. ಹಳ್ಳ ಕಾಣದೆ ನೇರವಾಗಿ ಬೈಕ್ ಸಮೇತ ಗುಂಡಿಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಒಬ್ಬ ಯುವಕ ಸ್ಥಳದಲ್ಲೇ ಸಾವಿಗೀಡಾದ್ರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಸಂತಾನ ಸಪ್ತಮಿ ಹೇಗೆ ಆಚರಿಸುವುದು ? ಇದರಿಂದ ದೊರೆಯುವ ಫಲವೇನು ಗೊತ್ತಾ?

Related Video