Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ಇಬ್ಬರು ಶಾಸಕರುಗಳಿಗೆ ನೋಟಿಸ್..!

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರಾಗಬೇಕು  ಎನ್ನುವ ಹೇಳಿಕೆಗೆ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ.  ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪರವಾಗಿ ನೀಡುತ್ತಿರುವ ಹೇಳಿಕೆಗೆ ಅಸಮಾಧಾನ ಭುಗಿಲೆದ್ದಿದೆ.

Nov 7, 2020, 3:56 PM IST

ಬೆಂಗಳೂರು, (ನ.07): ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರಾಗಬೇಕು  ಎನ್ನುವ ಹೇಳಿಕೆಗೆ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ.  ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪರವಾಗಿ ನೀಡುತ್ತಿರುವ ಹೇಳಿಕೆಗೆ ಅಸಮಾಧಾನ ಭುಗಿಲೆದ್ದಿದೆ.

'ನಾಯಕರಿಬ್ಬರ ಕಚ್ಚಾಟದಿಂದ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಸೋಲು' 

ಶಾಸಕರಿಬ್ಬರ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿ ಕೆಂಡಾಮಂಡಲವಾಗಿದ್ದು, ಉಪಚುನಾವಣೆ ಮುಗಿದ ಬೆನ್ನಲ್ಲೇ ಶಾಸಕರಿಬ್ಬರಿಗೆ ನೊಟೀಸ್ ನೀಡಲಾಗಿದೆ. ಪಕ್ಷದ ಸಂವಿಧಾನಕ್ಕೆ ವಿರೋಧಿಯಾದ ಹೇಳಿಕೆ ಅಂತ ಶಿಸ್ತು ಸಮಿತಿ ಅಭಿಪ್ರಾಯಪಟ್ಟಿದ್ದು, ಕೆಪಿಸಿಸಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.