Ashok on Eshwarappa: ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ: ಆರ್‌. ಅಶೋಕ್‌

ನಾಲ್ಕು ಗೋಡೆ ಮಧ್ಯೆ ಏನಾಗಿದೆ ಎಂದು ನಾನು ಹೇಳೋಕೆ ಆಗಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ. 
 

Share this Video
  • FB
  • Linkdin
  • Whatsapp

ನಾವೂ ಸಹ ಇಬ್ಬರ ಮಧ್ಯೆ ಮಧ್ಯಸ್ಥಿಕೆ ಮಾಡುತ್ತೇವೆ. ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ. ಕೆ.ಎಸ್‌.ಈಶ್ವರಪ್ಪರನ್ನ(KS Eshwarappa) ಸಮಾಧಾನ ಮಾಡುವ ಪ್ರಯತ್ನ ಆಗಿದೆ ಬೆಂಗಳೂರಿನಲ್ಲಿ(Bengaluru) ವಿಪಕ್ಷ ನಾಯಕ ಆರ್. ಅಶೋಕ್(R Ashok) ಹೇಳಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಕರೆತರುವ ಪ್ರಯತ್ನ ಆಗಿದೆ. ಜೆಡಿಎಸ್ ಕೋಲಾರ ಕ್ಷೇತ್ರಕ್ಕೂ ಬೇಡಿಕೆಯಿಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಅಮಿತ್ ಶಾ ಜೊತೆ 2 ಸುತ್ತಿನ ಸಭೆ ಆಗಿದೆ‌. ಇನ್ನೂ ಅಂತಿಮ ಚರ್ಚೆ ಆಗಬೇಕಿದೆ. ಈಶ್ವರಪ್ಪ ಮನೆಗೆ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲಾ ಭೇಟಿ ನೀಡಿದ್ದಾರೆ. ಕೇಂದ್ರ ನಾಯಕರ ಮನವೊಲಿಕೆಗೂ ಈಶ್ವರಪ್ಪ ಬಗ್ಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಯಡಿಯೂರಪ್ಪ ಮೋಸ ಮಾಡಿದ್ದಾರೆ: ಕೆ.ಎಸ್‌.ಈಶ್ವರಪ್ಪ

Related Video