ಆರ್. ಅಶೋಕ್‌ಗೆ ವಿಪಕ್ಷ ನಾಯಕ ಪಟ್ಟ..ಏನಿದು ಲೆಕ್ಕಾಚಾರ? 2 ಪ್ರಬಲ ಸಮುದಾಯಕ್ಕೆ ಮಣೆ ಹಾಕಿದ ಹೈಕಮಾಂಡ್
ಬಿಜೆಪಿಯಲ್ಲಿ ಕೊನೆಗೂ ವಿಪಕ್ಷನಾಯಕನಿಗೆ ಪಟ್ಟ ಕಟ್ಟಲಾಗಿದೆ. ಅಳೆದು ತೂಗಿ ಹೈಕಮಾಂಡ್ ಆರ್ ಅಶೋಕ್‌ಗೆ ಮಣೆ ಹಾಕಿದೆ. ಆದ್ರೆ ಇದರ ಹಿಂದೆ ಹೈಕಮಾಂಡ್ ನೂರೆಂಟ್ ಲೆಕ್ಕಾಚಾರ ಹಾಕಿದ್ರೆ.ಇತ್ತ ಅಶೋಕ್‌ಗೆ ಸಾಲು ಸಾಲು ಸವಾಲು ಮುಂದಿದೆ.
ಲೋಕಸಭೆ ಹೊತ್ತಲ್ಲೇ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪು ಶುರುವಾಗಿದೆ. ಅಳೆದುತೂಗಿ ಹೈಕಮಾಂಡ್ ಆರ್ ಅಶೋಕ್‌ಗೆ(R.Ashok) ವಿಪಕ್ಷ ನಾಯಕ ಪಟ್ಟ ಕಟ್ಟಿದೆ. ಆದ್ರೆ ಸಾಮ್ರಾಟ್ ಅಶೋಕ್‌ಗೆ ವಿರೋಧ ಪಕ್ಷದ ನಾಯಕನ(Opposition leader) ಆಯ್ಕೆ ಮಾಡಿದ್ರಲ್ಲಿ ಹೈಕಮಾಂಡ್ ನೂರೆಂಟು ಲೆಕ್ಕಾಚಾರ ಹಾಕ್ಕೊಂಡಿದೆ. ಲಿಂಗಾಯತರಿಗೆ ರಾಜ್ಯಾಧ್ಯಕ್ಷ.ಒಕ್ಕಲಿಗರಿಗೆ ವಿರೋಧ ಪಕ್ಷ ನೀಡಿದ್ರಲ್ಲಿ ವರಿಷ್ಠರು ತಮ್ಮದೇ ರಣತಂತ್ರ ಹೆಣೆದಿದ್ದಾರೆ. ಲೋಕಸಭೆಗೆ ಬಿಜೆಪಿ,ಜೆಡಿಎಸ್(JDS) ದೋಸ್ತಿ ಮಾಡಿಕೊಂಡಿದೆ. ಆದ್ರೆ ಜೆಡಿಎಸ್‌ನ್ನೆ ನಂಬಿ ಕೈ ಕಟ್ಟಿ ಕೂರಲು ಹೈಕಮಾಂಡ್ ಸಿದ್ಧವಿಲ್ಲ.ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಪಕ್ಷಗಟ್ಟಿಗಳಿಸೋದೇ ವರಿಷ್ಠರು ಮುಖ್ಯವಾಗಿದ್ದು ಒಕ್ಕಲಿಗ ಮತಗಳ ಸೆಳೆಯಲು ಈ ತಂತ್ರ ಹೆಣೆದಿದೆ ಎನ್ನಲಾಗ್ತಿದೆ. ಇದರ ಜೊತೆ ಈಗಾಗಲೇ ಲಿಂಗಾಯತರಿಗೆ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟ ಬಿಜೆಪಿ ರಾಜ್ಯದ 2 ಪ್ರಬಲ ಸಮುದಾಯಗಳಿಗೆ ಹುದ್ದೆ ಕೊಟ್ಟಿದೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಎರಡು ಪ್ರಬಲ ಸಮುದಾಯಗಳ ಓಲೈಕೆ ತಂತ್ರ ಅನುಸರಿದಲಾಗಿದೆ. ವಿಪಕ್ಷ ನಾಯಕ ಪಟ್ಟ ಗಿಟ್ಟಿಸಿಕೊಂಡ ಆರ್.ಅಶೋಕ್ ಮುಂದೆ ಸಾಲು ಸಾಲು ಸವಾಲುಗಳಿವೆ. ಇನ್ನು ಒಕ್ಕಲಿಗ ಸಮುದಾಯಕ್ಕೇ ವಿಪಕ್ಷ ಸ್ಥಾನ ನೀಡೋದೇ ಆಗಿದ್ದರೆ ಹಲವು ಒಕ್ಕಲಿಗ ನಾಯಕರು ಬಿಜೆಪಿಯಲ್ಲಿ ಶಾಸಕರಿದ್ದರು. ಹೀಗಿದ್ದರೂ ಬಿಜೆಪಿ ಹೈಕಮಾಂಡ್(BJP Highcommand) ಆರ್.ಅಶೋಕ್ ಅವರನ್ನೇ ಪರಿಗಣಿಸಿದ್ಯಾಕೆ ಅನ್ನೋ ಪ್ರಶ್ನೆ ಹುಟ್ಟುತ್ತೆ. ಅದಕ್ಕೂ ಹಲವು ಕಾರಣಗಳಿವೆ.ಬಿಜೆಪಿಯಲ್ಲಿ ಹಲವು ಒಕ್ಕಲಿಗ ಸಮುದಾಯದ ಶಾಸಕರಿದ್ದರೂ, ಆರ್. ಅಶೋಕ್ ಸೀನಿಯರ್, ಸತತ 7 ಬಾರಿ ಶಾಸಕರಾಗಿ ಗೆದ್ದಿರುವ ಪ್ರಬಲ ನಾಯಕ ಆರ್ ಅಶೋಕ್ ಡಿಸಿಎಂ ಹಾಗೂ ಸಚಿವರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
ಇದರ ಜೊತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೂ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಅಂದ್ರೆ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಇದರ ಹಿಂದೆ ಆರ್.ಅಶೋಕ್ ಪರಿಶ್ರಮವೂ ಇದೆ. ಹೀಗಾಗಿ ಹೆಚ್ಚು ಸ್ಥಾನ ಗೆದ್ದಿರುವ ಬೆಂಗಳೂರು ಭಾಗದ ನಾಯಕನಿಗೆ ಮಣೆ ಹಾಕುವ ಮೂಲಕ ಮುಂದಿನ ಲೋಕಸಭೆಗೆ ಅನುಕೂಲವಾಗುತ್ತೆ ಅನ್ನೋದು ಬಿಜೆಪಿ ಲೆಕ್ಕಾಚಾರ.ಇನ್ನು ಸದನದಲ್ಲಿ ಸರ್ಕಾರದ ಲೋಪದೋಷವನ್ನು ಗಟ್ಟಿ ಧ್ವನಿಯಲ್ಲಿ ಮಾತನಾಡಲು ಅಶೋಕ್ ಸಮರ್ಥ ನಾಯಕ ಅನ್ನೋದು ಕೂಡ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.
ಇದನ್ನೂ ವೀಕ್ಷಿಸಿ: Today Horoscope: ಇಂದು ಈ ರಾಶಿಯವರಿಗೆ ಶತ್ರುಗಳ ಬಾಧೆ ಕಾಡಲಿದ್ದು, ಕೆಲಸದಲ್ಲಿ ಕಿರಿಕಿರಿ ಉಂಟಾಗಲಿದೆ..