Asianet Suvarna News Asianet Suvarna News

JDS ಕುಟುಂಬ ರಾಜಕಾರಣ ಪಾರ್ಟಿ..ನಮ್ದು ಅದರ ವಿರುದ್ಧ: ಪ್ರೀತಂ ಗೌಡ

ಜೆಡಿಎಸ್‌ -ಬಿಜೆಪಿ ಮೈತ್ರಿಗೆ ದೊಡ್ಡ ಗೌಡರ ತವರಲ್ಲೇ ವಿರೋಧ ವ್ಯಕ್ತವಾಗಿದೆ. ಜೆಡಿಎಸ್ ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
 

ಲೋಕಸಭೆ ಚುನಾವಣೆಗೆ JDS-BJP ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಪ್ರೀತಂ ಗೌಡ(Preetham J Gowda) ಮಾತನಾಡಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್(JDS) ಅಡ್ಜೆಸ್ಟ್‌ಮೆಂಟ್,ಕಾಂಪ್ರಮೈಸ್ ಪಾರ್ಟಿ, ಜೆಡಿಎಸ್ ಪಕ್ಷ ಉಳಿಸಿಕೊಳ್ಳಲು ಬಿಜೆಪಿ(BJP) ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. JDS ಪಕ್ಷ ಕುಟುಂಬ ರಾಜಕಾರಣದ ಪಾರ್ಟಿ ಎಂದು ಪ್ರೀತಂ ಗೌಡ ಗರಂ ಆಗಿ ಹೇಳಿದ್ದಾರೆ. ನಾವು ಅದರ ವಿರುದ್ಧ ಇದ್ದು, ಜೆಡಿಎಸ್ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡಲ್ಲ ಎಂದು ಹೇಳುವ ಮೂಲಕ ಮೈತ್ರಿಗೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೌಡರ ತವರಲ್ಲೇ ವಿರೋಧ ವ್ಯಕ್ತವಾಗಿದೆ. 

ಇದನ್ನೂ ವೀಕ್ಷಿಸಿ:  ಗೌರಿ-ಗಣೇಶ ಹಬ್ಬಕ್ಕೆ ಪ್ರಯಾಣ ಮತ್ತಷ್ಟು ದುಬಾರಿ: ಪ್ರಯಾಣಿಕರಿಂದ ಖಾಸಗಿ ಬಸ್‌ಗಳ ಹಗಲು ದರೋಡೆ !

Video Top Stories