ಹೊಳೆನರಸೀಪುರದಲ್ಲಿ ರೇವಣ್ಣ V/s ಪ್ರೀತಂಗೌಡ?

ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆ ದಿನ
ಹಾಸನ ರಾಜಕಾರಣದಲ್ಲಿ ರೋಚಕ ಟ್ವಿಸ್ಟ್‌
ರೇವಣ್ಣ ಕೋಟೆಗೆ ಲಗ್ಗೆ ಇಟ್ಟ ಪ್ರೀತಂಗೌಡ

Share this Video
  • FB
  • Linkdin
  • Whatsapp

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಇವತ್ತು ಕೊನೆ ದಿನವಾಗಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಹೊಳೆನರಸೀಪುರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇತ್ತಾ ಜೆಡಿಎಸ್‌ನಿಂದ ಹೊಳೆನರಸೀಪುರದ ಜೆಡಿಎಸ್‌ ಅಭ್ಯರ್ಥಿಯಾಗಿ ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಪ್ರೀತಂಗೌಡ ಮಾತನಾಡಿ, ರಾಜ್ಯ ನಾಯಕರ ಸೂಚನೆ ಮೇರೆಗೆ ನಾನು ಕೆಲಸ ಮಾಡುತ್ತೇನೆ. ನಂದು ಏನು ಇಲ್ಲ, ಇನ್ನೂ ಏನು ತೀರ್ಮಾನ ಆಗಿಲ್ಲ. ದೆಹಲಿ ವರಿಷ್ಠರ ತೀರ್ಮಾನಕ್ಕೆ ಪ್ರೀತಂಗೌಡ ಯಾವತ್ತೂ ಬದ್ಧನಾಗಿರುತ್ತಾನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಪ್ರೀತಂಗೌಡ ಪತ್ನಿ ಕಾವ್ಯಾ ನಾಮಪತ್ರ ಸಲ್ಲಿಕೆ

Related Video