ಹಾಸನದಲ್ಲಿ ಪ್ರೀತಂಗೌಡ ಪತ್ನಿ ಕಾವ್ಯಾ ನಾಮಪತ್ರ ಸಲ್ಲಿಕೆ

ಹಾಸನ ಅಭ್ಯರ್ಥಿಯಾಗಿ ಕಾವ್ಯಾ ನಾಮಪತ್ರ ಸಲ್ಲಿಕೆ
ಹೊಳೆನರಸೀಪುರದಲ್ಲಿ ಪ್ರೀತಂಗೌಡ ಉಮೇದುವಾರಿಕೆ ಸಲ್ಲಿಕೆ
ಗೌಡರ ಕುಟುಂಬದ ವಿರುದ್ಧ ಕನ್‌ಫ್ಯೂಸ್ ಅಸ್ತ್ರ ಪ್ರಯೋಗ?

Share this Video
  • FB
  • Linkdin
  • Whatsapp

ಹಾಸನ: ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹಾಸನದ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂಗೌಡ ಪತ್ನಿ ಕಾವ್ಯಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಆದರೆ ತಾಂತ್ರಿಕ ದೋಷ ಅರಿತು ಮುಂಜಾಗ್ರತೆ ವಹಿಸಿ ಪತ್ನಿ ಕೈಯಿಂದ ಪ್ರೀತಂ ಗೌಡ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಹೊಳೆನರಸೀಪುರದಲ್ಲಿ ಪ್ರೀತಂಗೌಡ ನಾಮಪತ್ರ ಸಲ್ಲಿಸಿದ್ದಾರೆ. ಹೊಳೆನರಸೀಪುರದಿಂದ ರೇವಣ್ಣ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾವ್ಯಾ ಅವರು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಪ್ರೀತಂಗೌಡ ಬೆಂಬಲಿಗರು ಸಾಥ್‌ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ: ಸ್ವರೂಪ್‌ಗೆ ರೇವಣ್ಣ ಕುಟುಂಬದ ಬೆಂಬಲ: ಹಾಸನದಲ್ಲಿ ಜೆಡಿಎಸ್‌ ಗೆಲುವು ಖಚಿತನಾ?

Related Video