ದುರಹಂಕಾರಿ ಸಿದ್ದುಗೆ ಪಾಠ ಕಲಿಸುವ ಕೆಲಸ ಮಾಡಬೇಕು: ಪ್ರತಾಪ್‌ ಸಿಂಹ

ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದು, ಅವರಿಗೆ ವರುಣದಲ್ಲಿ ಸೋಲುವ ಭಯ ಶರುವಾಗಿದೆ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು: ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಅವರು ಬೇರೆ ಸಮುದಾಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಇದು ಅವರು ಬೇರೆ ಸಮುದಾಯಗಳ ಬಗ್ಗೆ ಹೊಂದಿರುವ ತುಚ್ಛ ಭಾವನೆಯನ್ನು ತೋರಿಸುತ್ತದೆ. ಎಲ್ಲಾರನ್ನೂ ಏಕವಚನದಲ್ಲಿ ಅವರು ಮಾತನಾಡಿಸುತ್ತಾರೆ. ಇಂತಹ ದುರಂಹಕಾರಿ ಸಿದ್ದರಾಮಯ್ಯ ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಬೇಕು. ಮೈಸೂರು ಮಹಾರಾಜರ ಊರು, ಇಲ್ಲಿ ಅವರು ಎಲ್ಲಾರಿಗೂ ಗೌರವ ಕೊಟ್ಟಿದ್ದಾರೆ. ಇಂತಹ ದುರಂಹಕಾರಿಗೆ ಜನ ಈ ಬಾರಿ ತಕ್ಕ ಪಾಠ ಕಲಿಸಬೇಕು. ಅವರು ಹನುಮ ಭಕ್ತರಿಗೆ ಸಹ ಅವಮಾನ ಮಾಡಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ವರುಣದಲ್ಲಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಸಿದ್ದು ಈ ಬಾರಿ ಸೋಲ್ತಾರೆ, ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನನೂ ಬರಲ್ಲ: ಈಶ್ವರಪ್ಪ

Related Video