ದಾವಣಗೆರೆಯಲ್ಲಿ ಲೋಕಸಮರಕ್ಕೆ ತಯಾರಿ ಶುರು: ಶಾಮನೂರು ಕುಟುಂಬದಿಂದಲೇ ಕಣಕ್ಕಿಳೀತರಾ ಅಭ್ಯರ್ಥಿ..?

ದಾವಣಗೆರೆಯಲ್ಲಿ ಕಾಂಗ್ರೆಸ್‌ನಿಂದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿಗೆ ಲೋಕಸಭೆಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿದೆ.
 

Share this Video
  • FB
  • Linkdin
  • Whatsapp

ದಾವಣಗೆರೆ: ಕಾಂಗ್ರೆಸ್‌ನಲ್ಲಿ ಟಿಕೆಟ್ ಲೆಕ್ಕಾಚಾರ ಜೋರಾಗಿದೆ. ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿದೆ. ಇವರು ವಿವಿಧ ಕಾರ್ಯಕ್ರಮಗಳಲ್ಲಿ ಪ್ರಭಾ ಮಲ್ಲಿಕಾರ್ಜುನ್(Prabha Mallikarjun) ಭಾಗಿಯಾಗುತ್ತಿದ್ದಾರೆ. ಇವರು ಈಗಾಗಲೇ ಮುಂದಿನ ಲೋಕಸಭಾ(Loksabha) ಚುನಾವಣೆಗೆ ತಯಾರಿ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಕೃಷ್ಣಾಷ್ಟಮಿ ಹಬ್ಬದಲ್ಲಿ ಪ್ರಭಾ ಮಲ್ಲಿಕಾರ್ಜುನ ಭಾಗಿಯಾಗಿ, ಲಂಬಾಣಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ದಾವಣಗೆರೆ (Davanagere)ತಾಲೂಕು ಓಬಜ್ಜಿಹಳ್ಳಿ ತಾಂಡಾದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಜಗಳೂರು, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ, ಹರಿಹರದಲ್ಲಿ ಸುತ್ತಾಟ ನಡೆಸಿದ್ದಾರೆ. ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಜನಸೇವೆ, ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಹೀಗಾಗಿ ಸಚಿವರ ಪತ್ನಿಯ ನಿಗೂಢ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

ಇದನ್ನೂ ವೀಕ್ಷಿಸಿ: ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

Related Video