ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

ಇದು ಇದು ಬಿಗ್-3 ಪವರ್, ಆ ಒಂದು ವರದಿಗೆ ಇಡೀ ಕರುನಾಡೇ ಮರುಗಿತ್ತು. 6 ವರ್ಷದಿಂದ ಕತ್ತಲೇ ಕೂಪದಲ್ಲಿದ್ದ ಅಮ್ಮ-ಮಗಳ ನೆರೆವಿಗೆ ಬಂದಿದ್ದೇ ಬಿಗ್- 3. ಹಾಗಿದ್ರೆ ಅವರ ಬದುಕು ಬದಲಾಗಿದ್ದಾದ್ರೂ ಹೇಗೆ?...ಈ ಸ್ಪೆಷಲ್ ರಿಪೋರ್ಟ್ ಇದೆ.
 

Share this Video
  • FB
  • Linkdin
  • Whatsapp

ಬಿಗ್-3 ಅಂದ್ರೆ ಹಂಗೇ ನೋಡಿ...ಹಿಡಿದ ಕೆಲಸವನ್ನ ಮುಗಿಸೋವರೆಗೂ ಬಿಡಲ್ಲ... 4 ದಿನಗಳ ಹಿಂದೆ ಬುದ್ಧಿಮಾಂದ್ಯ ಮಗಳ ಜೊತೆ ತಾಯಿ ನರಳಾಟದ ಸುದ್ದಿ ಪ್ರಸಾರ ಮಾಡಲಾಗಿತ್ತು. ಬುದ್ಧಿಮಾಂದ್ಯ ಮಗಳನ್ನು ಸಾಕಲು ತಾಯಿ, ಅವರಿವರ ಮನೆ ಮುಸೂರೆ ತಿಕ್ಕಿ ಜೀವನ ನಡೆಸುತ್ತಿದ್ದಳು. ಇತ್ತ ಕಿವಿ(Ear) ಕೇಳಿಸದೇ ತಾಯಿ ಶಶಿಕಲಾ ಕಂಗಾಲಾಗಿದ್ರು. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾ ಪರಿಸ್ಥಿತಿಯನ್ನ ಬಿಗ್-3(BIG 3) ತಂಡವು ಕಣ್ಣಾರೆ ಕಂಡಿತ್ತು. ಇದೀಗ ಶಶಿಕಲಾ ಬದುಕಿನ ಹೊಸ ಅಧ್ಯಾಯಕ್ಕೆ ಬಿಗ್-3 ಕಾರಣವಾಗಿದೆ. ಇದೀಗ ಬಡಮಹಿಳೆ (Woman) ಶಶಿಕಲಾ ಬದುಕಿಗೆ ಹೊಸ ಬೆಳಕು ಮೂಡಿಸಿದೆ ನಿಮ್ಮ ಬಿಗ್-3. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾಗೆ ಕೇವಲ ನಾಲ್ಕು ತಾಸಿನಲ್ಲಿ ಬಿಗ್-3 ತಂಡವು ಕಿವುಡುತನದ ಸಮಸ್ಯೆ ಬಗೆಹರಿಸಿದೆ. ಶಶಿಕಲಾರ ಕಿವಿ ಪರೀಕ್ಷೆ ವೇಳೆ ಒಂದು ಕಿವಿಯಲ್ಲಿ 53% ಮತ್ತೊಂದು ಕಿವಿಯಲ್ಲಿ 68 % ಕಿವುಡುತನ ಇರುವುದು ಪತ್ತೆಯಾಗಿತ್ತು. ಒಟ್ಟಾರೆ ಎರಡು ಕಿವಿಯಲ್ಲಿ ಶೇಕಡಾ 56ರಷ್ಟು ಕಿವುಡತನ ಇರೋದು ಪತ್ತೆಯಾಗಿತ್ತು. ಇನ್ನೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಶ್ರವಣ ಯಂತ್ರ ಅಳವಡಿಸಿದ್ರೆ ಕಿವಿ ಕೇಳುತ್ತೆ ಅಂದಿದ್ರು. ವೈದ್ಯರು, ಇಯರ್ ಮೆಷಿನ್ (Ear machine) ಅಗತ್ಯವಿದೆ ಎಂದಿದ್ದೆ ತಡ ಬಿಗ್-3 ತಂಡ, ತಡಮಾಡದೇ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ, ಕಿವಿ ಕೇಳುವ ಯಂತ್ರ ಕೊಡಿಸಿಯೇ ಬಿಟ್ಟಿತು. ಕಿವಿ ಕೇಳದೇ ನೊಂದಿದ್ದ ತಾಯಿ ಮೊಗದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿದೆ.

ಇದನ್ನೂ ವೀಕ್ಷಿಸಿ: ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!

Related Video