ಖಡಕ್‌ ಖರ್ಗೆ ಮುಂದಿದೆ 5 ಕಟ್ಟರ್‌ ಸವಾಲು!

ದೇಶದಲ್ಲಿ 137 ವರ್ಷಗಳ ಇತಿಹಾಸ ಹೊಂದಿರುವ ಪಕ್ಷಕ್ಕೀಗ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ. ಇವರ ಮುಂದೆ ಈಗ ಐದು ಪ್ರಮುಖ ಸವಾಲುಗಳು ನಿಂತಿವೆ. ಮಲ್ಲಿಕಾರ್ಜುನ ಖರ್ಗೆಗೆ 7897 ಮತ ಚುನಾವಣೆಯಲ್ಲಿ ಬಿದ್ದಿದ್ದರೆ, ಶಶಿ ತರೂರ್‌ಗೆ 1072 ಮತ ಬಿದ್ದಿದೆ.

First Published Oct 20, 2022, 2:25 PM IST | Last Updated Oct 20, 2022, 2:25 PM IST

ಬೆಂಗಳೂರು (ಅ.20): ಮೋದಿ ಅಶ್ವಮೇಧ.. ಕೈ ಸೇತುಬಂಧ.., ಖರ್ಗೆ ಖೇಲ್..! ಕೈ ಕಟ್ಟಾಳುವಿನ ಮುಂದೆ ಎದ್ದು ಕೂತಿವೆ  ಪಂಚ ಸವಾಲ್..! ಖದರ್ ತೋರಿಸ್ತಾರಾ ಕೈ ಗಟ್ಟಿಗ..? ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಶಕ್ತಿನಾ ದೌರ್ಬಲ್ಯನಾ..? ಅಳಿದುಳಿದಿರೋ ಕಾಂಗ್ರೆಸ್'ಗೆ ಹೊಸ ದಿಕ್ಕು ತೋರಿಸ್ತಾರಾ ಗಾಂಧಿ ಫ್ಯಾಮಿಲಿಯ ಪರಮನಿಷ್ಠ..? ಖದರ್ ಖರ್ಗೆಗೆ ಇದೆ ಕಟ್ಟರ್ ಚಾಲೆಂಜ್.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖಡಕ್ ಖರ್ಗೆ ಮುಂದಿರೋದು ಕಟ್ಟರ್ ಚಾಲೆಂಜ್. 2024ರ ಮಹಾಭಾರತ ಮಹಾಯುದ್ಧ, ಗಾಂಧಿ ಕುಟುಂಬದ ಮೇಲಿನ ನಿಷ್ಠೆಯ ಕಷ್ಟ, ಕೈ ಭವಿಷ್ಯ ನಿರ್ಧರಿಸಲಿರೋ ಆರು ವಿಧಾನಸಭಾ ಅಖಾಡಗಳು... ಈ ಚಾಲೆಂಜ್'ಗಳನ್ನು ಖಡಕ್‌ ಖರ್ಗೆ ಗೆಲ್ತಾರಾ ಅನ್ನೋ ಕುತೂಹಲವೇ ಎಲ್ಲರಲ್ಲಿದೆ.

Congress Election: ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷ; ಈ ಸ್ಥಾನ ಪಡೆದ ಎರಡನೇ ಕನ್ನಡಿಗ

137 ವರ್ಷಗಳ ಇತಿಹಾಸದ ಪಕ್ಷಕ್ಕೆ 80 ವರ್ಷದ ಖರ್ಗೆ ಅಧ್ಯಕ್ಷ. ಕೈ ಪಾಳೆಯದ ಹಳೇ ಪೈಲ್ವಾನ್ ಖರ್ಗೆಗೆ 2024ರ ಮಹಾಯುದ್ಧಕ್ಕೂ ಮೊದಲು ಆರು ಅಖಾಡಗಳ ಅಗ್ನಿಪರೀಕ್ಷೆ ಎದುರಾಗಲಿದೆ. ಅಲ್ಲಿ ಗೆದ್ದರಷ್ಟೇ ಮುಂದಿನ ಹಾದಿ ಸಲೀಸು.