ನಾನು ಸ್ವಲ್ಪ ಬದಲಾಗಿದ್ರೆ ಎರಡು ಸಲ ರಾಜ್ಯದ ಸಿಎಂ ಆಗ್ತಿದ್ದೆ: ವಾಟಾಳ್ ನಾಗರಾಜ್

ನಾನು ಸ್ವಲ್ಪ ಬದಲಾಗಿದ್ರೆ ಎರಡು ಸಲ ರಾಜ್ಯದ ಸಿಎಂ ಆಗ್ತಿದ್ದೆ ಎಂದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

Share this Video
  • FB
  • Linkdin
  • Whatsapp

ಕನ್ನಡ ಬಿಟ್ಟು ಆ ಕಡೆ ಈ ಕಡೆ ಹೋಗಿಲ್ಲ, ಕನ್ನಡಕ್ಕಾಗಿ ಇಡೀ ಜೀವನವನ್ನೇ ಅರ್ಪಣೆ ಮಾಡಿದ್ದೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು. ನನ್ನ ಹೋರಾಟ ಘೋಷಣೆಯಾದ್ರೆ, ರಾಜ್ಯ ಸರ್ಕಾರ ನಡುಗುತ್ತಿದ್ದವು. ಆರು ದಶಕದಿಂದ ಹನ್ನೊಂದು ಸಾವಿರ ಹೋರಾಟ ಮಾಡಿದ್ದೇನೆ. ಒಬ್ಬ ಚಳವಳಿಗಾರನಾಗಿ ಕನ್ನಡಿಗರ ಏಳಿಗೆಗಾಗಿ, ಚಳವಳಿಗಾರನಾಗಿ ನನ್ನನ್ನು ನಾನು ಗುರುತಿಸಿಕೊಂಡಿರುವುದು ಹೆಮ್ಮೆಯಿದೆ ಎಂದರು. 60ರ ದಶಕದಲ್ಲಿ ಬೆಂಗಳೂರು ಯಾರ ಕೈಯಲ್ಲಿ ಇದೆ ಎನ್ನುವ ಪರಿಸ್ಥತಿ ನಿರ್ಮಾಣ ವಾಗಿತ್ತು. ಆಗ ಹೋರಾಟವನ್ನು ಆರಂಭಿಸಿದೆ ಎಂದು Political Off-Beat ಸಂದರ್ಶನದಲ್ಲಿ ವಾಟಾಳ್‌ ನಾಗರಾಜ್‌ ಹೇಳಿದರು.

Related Video