ಕಾಂಗ್ರೆಸ್‌ಗೆ ತಲೆನೋವಾದ ಧಾರವಾಡದ 6 ಕ್ಷೇತ್ರ: ಕೈ ಟಿಕೆಟ್ ಹಂಚಿಕೆ ಮತ್ತಷ್ಟು ವಿಳಂಬ?

ಪಾಲಿಟಿಕಲ್‌ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್‌ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.

Share this Video
  • FB
  • Linkdin
  • Whatsapp

ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರದ ಅಭ್ಯರ್ಥಿ ಮಾತ್ರ ಘೋಷಣೆ ಮಾಡುವಲ್ಲಿ ಕೈ ನಾಯಕರು ಯಶಸ್ವಿಯಾಗಿದ್ದು, ಇನ್ನುಳಿದ ಆರು ಕ್ಷೇತ್ರದ ಟಿಕೆಟ್ ಯಾರಿಗೆ ಎನ್ನುವುದು ಕಗ್ಗಂಟಾಗಿ ಉಳಿದಿದೆ. ಇನ್ನು ಕಲಘಟಗಿ- ಕುಂದಗೋಳ- ನವಲಗುಂದ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಹಂಚಿಕೆ ಮತ್ತಷ್ಟು ವಿಳಂಬವಾಗುವ ಸಾದ್ಯತೆ ಇದೆ.
ಅದಲ್ಲದೆ ಕುಂದಗೋಳದ ಹಾಲಿ‌ ಶಾಸಕಿ ಕುಸುಮಾವತಿ ಶಿವಳ್ಳಿಗೆ ಟಿಕೆಟ್ ನೀಡದಂತೆ ಇತರೆ ಆಕಾಂಕ್ಷಿ ಒತ್ತಡ ಹಾಕುತ್ತಿದ್ದಾರೆ. ಮತ್ತೊಂದೆಡೆ ಕಲಘಟಗಿಯಲ್ಲೂ ಸಂತೋಷ ಲಾಡ್ ಗೆ ಮೊದಲ‌ ಪಟ್ಟಿಯಲ್ಲಿ ಅವಕಾಶ ಸಿಕ್ಕಿಲ್ಲ, ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಮಧ್ಯೆ ಟಿಕೆಟ್ ಫೈಟ್ ಜೋರಾಗಿದ್ದು ಕೈ ನಾಯಕರಿಗೆ ತಲೆನೋವು ಆಗಿ ಪರಿಣಮಿಸಿದೆ.

Related Video