Political Express: ಶಿಗ್ಗಾವಿಯಲ್ಲಿ ಬೊಮ್ಮಾಯಿಗೆ ಟಕ್ಕರ್‌ ನೀಡಲು ಹೊರಟಿದ್ದ ಕಾಂಗ್ರೆಸ್‌ಗೆ 'ಖಾದ್ರಿ' ಶಾಕ್!

ಪಾಲಿಟಿಕಲ್‌ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್‌ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.

Share this Video
  • FB
  • Linkdin
  • Whatsapp

ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದಿಂದ ವಿನಯ್‌ ಕುಲಕರ್ಣಿ ಕಣಕ್ಕಿಳಿಸುವ ಲೆಕ್ಕಾಚಾರದ ಬೆನ್ನಲೆ ಕಾಂಗ್ರೆಸ್‌ ನಾಯಕರಿಗೆ ಶಾಕ್‌ ನೀಡಲು ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಮುಂದಾಗಿದ್ದಾರೆ. ಹಾವೇರಿಯಲ್ಲಿ ಸಿ ಎಂ ಬೊಮ್ಮಾಯಿ ವಿರುದ್ದ ಸತತವಾಗಿ 3 ಸಲ ಸೋತಿರುವ ಅಜ್ಜಂಪೀರ್‌ ಖಾದ್ರಿಗೆ ಮತ್ತೆ ಟಿಕೆಟ್‌ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಲಿಯಲು ಚಿಂತನೆ ನಡೆಸಿದ್ದಾರೆ. ಅಜ್ಜಂಪೀರ್‌ ಖಾದ್ರಿ ನಡೆಯಿಂದ ದಿಕ್ಕೆಟ್ಟ ಕೈ ನಾಯಕರು ಶಿಗ್ಗಾವಿ ಟಿಕೆಟ್‌ ವಿಚಾರವಾಗಿ ಗೊಂದಲಕ್ಕೆ ಸಿಲುಕಿದ್ದಾರೆ. ಅಜ್ಜಂಪೀರ್‌ ಖಾದ್ರಿ ಮನವೊಲಿಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಕಸರತ್ತು ಮಾಡುತ್ತಿದ್ದಾರೆ ಆದರೆ ಹೈಕಮಾಂಡ್‌ ಮನೊಲಿಕೆಗೆ ಖಾದ್ರಿ ಒಪ್ಪಲಿಲ್ಲ ಖಾದ್ರಿ ಬೆಂಬಲ ವಿಲ್ಲದೆ ಹಾವೇರಿ ಗೆಲ್ಲಲ್ಲು ಕಷ್ಟವಾಗಿರುವ ಕಾಂಗ್ರೆಸ್‌ಗೆ ಹೊಸ ಟೆನ್ಷನ್‌ ಶುರುವಾಗಿದೆ

Related Video