Political Express: ಮುಸ್ಲಿಂ ಟೋಪಿ ಧರಿಸಿ ಬಿಜೆಪಿ ಶಾಸಕ ರಾಜೂಗೌಡ ಮತಬೇಟೆ..!

ಪಾಲಿಟಿಕಲ್‌ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್‌ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.
 

Share this Video
  • FB
  • Linkdin
  • Whatsapp

ಬಿಸಿಲ ನಾಡು ಯಾದಗಿರಿಯಲ್ಲಿ ಚುನಾವಣಾ ಕಾವು ರಂಗೇರಿದ್ದು, ಚುನಾವನೆ ಘೋಷಣೆಗೂ ಮುನ್ನವೆ ಅಭ್ಯರ್ಥಿಗಳು ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ. ಸುರಪುರದಲ್ಲಿ ಮುಸ್ಲಿಂ ಟೋಪಿ ಧರಿಸಿ ಬಿಜೆಪಿ ಶಾಸಕ ರಾಜೂಗೌಡ ಅಲ್ಪಸಂಖ್ಯಾತರ ಮತ ಬೇಟೆಗೆ ಇಳಿದರು. ಸುರಪುರ ತಾಲೂಕಿನ ಕೋಡೆಕಲ್‌ ಗ್ರಾಮದಲ್ಲಿ ಮುಸ್ಲಿಂ ಟೋಪಿ ಧರಿಸಿ ಬಿಲಾಲ್‌ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರೆವೇರಿಸಿದರು . ಈ ವೇಳೆ ಮುಸ್ಲಿಂ ಸಮುದಾಯದವರಿಗೆ ಕೇಸರಿ ಶಾಲು ಹೋದಿಸಿ ಕೋಮು ಸೌಹಾರ್ದತೆ ಸಂದೇಶವನ್ನು ಸಾರಿದರು ಬಳಿಕ ಮಾತನಾಡಿದ ಶಾಸಕ ರಾಜುಗೌಡ ನಾನು ಒಬ್ಬ ಹಿಂದೂವಾಗಿ ಮುಸ್ಲಿಂ ಟೋಪಿ ಹಾಕಿಕೊಳ್ಳುತ್ತಿದ್ದೇನೆ ನಮ್ಮ ನಡುವೆ ಯಾವದೇ ಜಾತಿ ಧರ್ಮ ಬೇಧ ಭಾವವಿಲ್ಲ ಎಂದು ಹೇಳಿದರು. 

Related Video