ಸಂಸದರಿಗೆ ಮೋದಿ ಕ್ಲಾಸ್: ಜನರೊಂದಿಗಿನ ಒಡನಾಟದ ಬಗ್ಗೆ ಪ್ರಧಾನಿ ಸಲಹೆ

ಸಂಸದರೊಂದಿಗೆ ಪ್ರಧಾನಿ ಮೋದಿ ಸರಣಿ ಸಭೆ
ಪ್ರಚಾರ ನಡೆಸುವ ರೀತಿಯ ಬಗ್ಗೆ ಮೋದಿ ಮಾತು
ಸಭೆಯಲ್ಲಿ ಜೆ ಪಿ ನಡ್ಡಾ, ನಿತಿನ್ ಗಡ್ಕರಿ ಭಾಗಿ
 

Share this Video
  • FB
  • Linkdin
  • Whatsapp

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಪ್ರಧಾನಿ ಮೋದಿ(PM Modi) ಸಂಸದರ ಮೀಟಿಂಗ್(MPs Meeting) ಕರೆದಿದ್ದಾರೆ. ಸಂಸದರ ಜೊತೆ ಹತ್ತು ದಿನ ಸರಣಿ ಸಭೆ ನಡೆಸಲಿದ್ದಾರೆ. ಎನ್‌ಡಿಎ ಸಂಸದರಿಗೆ ಸಭೆಗೆ ಹಾಜರಾಗುವಂತೆ ಬುಲಾವ್ ನೀಡಿದೆ. ಎನ್ಡಿಎಯಲ್ಲಿರುವ 430 ಸಂಸದರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ, 11 ಟೀಂ ಗಳಾಗಿ ವಿಂಗಡಿಸಿ ಪ್ರತಿ ದಿನವೂ ಸಂಸದರಿಗೆ ಮೋದಿ ಹಿತವಚನ ನೀಡಲಿದ್ದಾರೆ. ಆಗಸ್ಟ್ 10ರ ವರೆಗೆ ಮೋದಿ ಮೀಟಿಂಗ್ ಮಾಡಲಿದ್ದಾರೆ. ಈ ಸಭೆಯಲ್ಲಿ ಸಂಸತ್ ಚುನಾವಣೆ ಎದುರಿಸುವುದು ಹೇಗೆ..?, ಜನರೊಂದಿಗೆ ಇರಬೇಕಾದ್ದು ಏನು ಎಂಬುದರ ಬಗ್ಗೆ ಮೋದಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಜನರಿಗೆ ಕೇಂದ್ರ ಸರ್ಕಾರದ ಯೋಜನೆ ತಿಳಿಸುವುದು , ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಸಾಧನೆ ವಿವರಿಸುವುದು, ಬೇರೆ ಪಕ್ಷದ ಆಡಳಿತವಿದ್ದರೆ ವೈಫಲ್ಯ ಎತ್ತಿ ತೋರಿಸುವುದು ಮೋದಿ ಮಂತ್ರವಾಗಿದೆ. ಮೊದಲ ಮೀಟಿಂಗ್‌ನಲ್ಲಿ ಉತ್ತರ ಪ್ರದೇಶದ ಸಂಸದರಿಗೆ ಮೋದಿ ಪಾಠ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ: ಶಾಸಕರ ದೂರಿನ ಬೆನ್ನಲ್ಲೇ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Related Video