
ಕರ್ನಾಟಕ ಸೋತ ಮೇಲೆ ಬದಲಾಯ್ತು ಪ್ರಧಾನಿ ಯುದ್ಧ ತಂತ್ರ..! ಹೇಗಿದೆ ಗೊತ್ತಾ ಮೋದಿ ಅಶ್ವಮೇಧ 3.0..?
ಲೋಕವಿಜಯಕ್ಕೆ ಶುರು ಮೋದಿ ಕಸರತ್ತು!
ವಿಪಕ್ಷಗಳ ವ್ಯೂಹಕ್ಕೆ ಮೋದಿ-ಶಾ ಪ್ರತಿವ್ಯೂಹ!
ಎದುರಾಳಿ ತಂತ್ರ ಛೇಧಿಸಲು ಮೋದಿ ಪಡೆ ಸನ್ನದ್ಧ!
ಲೋಕವಿಜಯಕ್ಕೆ ಸದ್ದಿಲ್ಲದೆ ಸಿದ್ಧವಾಗುತ್ತಿದೆ ಹಸ್ತ ಪಾಳಯದ ರಣತಂತ್ರ. ಆ ತಂತ್ರಕ್ಕೆ ಕಮಲ ಪಡೆ ಸಜ್ಜುಗೊಳಿಸ್ತಾ ಇದೆ ಪ್ರತಿತಂತ್ರ. ಕರ್ನಾಟಕದಲ್ಲಿ ಸೋತ ಮೇಲೆ ಚಾಣಾಕ್ಷ ಮೋದಿಯ ಯುದ್ಧ ತಂತ್ರ ಬದಲಾಗಿದೆ ಎನ್ನಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಅದಾಗಲೇ ಮತ್ತೆ ನಾನೇ ಬರ್ತೀನಿ, ನಾನೇ ಪ್ರಧಾನಿಯಾಗ್ತೀನಿ, ಇದೇ ಕೆಂಪುಕೋಟೆ ಮೇಲೆ ನಾನೇ ನನ್ನ ಕೈಯಾರೆ ತಿರಂಗ ಹಾರುಸ್ತೀನಿ ಅಂತ ಕಾನ್ಫಿಡೆಂಟ್ಆಗಿ ಹೇಳ್ತಾ ಇದಾರೆ. ಈ ಮೂಲಕ ಎದುರಾಳಿ ಪಡೆಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿಯ (BJP) ಸೋಲು ಕಾಂಗ್ರೆಸ್(Congress) ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡ್ಕೊಂಡಿರೋ ಪಕ್ಷಗಳಿಗೆ ಹೊಸ ಹುಮ್ಮಸ್ಸು ತುಂಬಿದೆ.. ಸರಿಯಾಗಿ ಟಕ್ಕರ್ ಕೊಟ್ರೆ, ಮೋದಿ ಅವರ ಅಶ್ವಮೇಧದ ಕುದುರೆನಾ ಕಟ್ಟಿಹಾಕೋದು ಕಷ್ಟದ ಮಾತಲ್ಲ ಅನ್ನೋ ನಿರ್ಣಯಕ್ಕೆ ಬಂದಿದ್ದಾರೆ.. ಅವರ ಆ ಉತ್ಸಾಹ, ಆ ಹುಮ್ಮಸ್ಸಿನ ಪ್ರತೀಕವಾಗಿದ್ದು, ಮೊನ್ನೆ ತಾನೆ ಲೋಕಸಭೇಲಿ ನಡೀತಲ್ಲಾ, ಆ ಅವಿಶ್ವಾಸ ಮಂಡನೆಯ ಅಗ್ನಿಪರೀಕ್ಷೆ.
ಇದನ್ನೂ ವೀಕ್ಷಿಸಿ: ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!