ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

ಆಪರೇಷನ್ ಚದುರಂಗದಲ್ಲಿ “ತಿರುಗುಬಾಣ” ದಾಳ..!
ಕಾಂಗ್ರೆಸ್ ಸೇರಲಿದ್ದಾರಂತೆ ಕಮಲ ದಳ ಶಾಸಕರು..!
ರಿವರ್ಸ್ ಆಪರೇಷನ್..ರಿವರ್ಸ್ ಗೇರ್ ಪಾಲಿಟಿಕ್ಸ್..!

Share this Video
  • FB
  • Linkdin
  • Whatsapp

ಆಪರೇಷನ್, ಇದು ಚದುರಂಗದಾಟದಲ್ಲಿ ಉರುಳಿರೋ ಮತ್ತೊಂದು ಆಪರೇಷನ್(operation) ದಾಳದ ಕಥೆ. ಇದು ಅಂತಿಂಥಾ ದಾಳವಲ್ಲ, ಕಮಲ ದಳ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಲಿರೋ ರೋಚಕ ದಾಳ. ರಾಜ್ಯ ರಾಜಕಾರಣ ಮತ್ತೊಂದು ಮೆಗಾ ಆಪರೇಷನ್‌ಗೆ ಸಾಕ್ಷಿಯಾಗುವ ದಿನ ಹತ್ತಿರ ಬರ್ತಾ ಇದೆ. ರಾಜಕೀಯವನ್ನು ಚದುರಂಗದಾಟ ಅಂತ ಕರೀತಾರೆ.. ಅಲ್ಲಿ ದಾಳಗಳನ್ನು ಎಸೀತಾನೆ ಇರ್ತಾರೆ, ದಾಳಕ್ಕೆ ತಕ್ಕಂತೆ ನಡೆಗಳು ಬದಲಾಗ್ತಾನೇ ಇರ್ತವೆ. ರಣರಂಗದ ಚದುರಂಗದಲ್ಲಿ ಅಂಥದ್ದೇ ಒಂದು ದಾಳ ಈಗ ಉರುಳಿ ಬಿದ್ದಿದೆ. ದೇಶವೇ ತಿರುಗಿ ನೋಡುವಂತೆ ರಾಜ್ಯವನ್ನು ಗೆದ್ದು ಅಧಿಕಾರ ಹಿಡಿದಾಯ್ತು. ಆದ್ರೆ ಕಾಂಗ್ರೆಸ್(Congress) ದಾಹ ಇನ್ನೂ ತೀರಿಲ್ಲ. ಹಸಿದ ಹೆಬ್ಬುಲಿಯಂತೆ ಬೇಟೆಗಾಗಿ ಹೊಂಚು ಹಾಕಿ ಕೂತಿದೆ ಕೈ ಪಾಳೆಯ. ಬಿಜೆಪಿ(BJP)-ಜೆಡಿಎಸ್'ನಿಂದ(JDS) ಹಾಲಿ ಶಾಸಕರೇ ಕಾಂಗ್ರೆಸ್ ಕಡೆ ಬರ್ತಿದ್ದಾರಂತೆ. ಸಿಟ್ಟಿಂಗ್ ಎಂಎಲ್ಎಗಳ ಜೊತೆ ಕೆಲ ಮಾಜಿ ಶಾಸಕರೂ ಕೈ ಪಾಳೆಯ ಸೇರಲು ರೆಡಿಯಾಗಿದ್ದಾರಂತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಇಷ್ಟು ದಿನ ಆಪರೇಷನ್ ಆಟದಲ್ಲಿ ಡ್ರೈವರ್ ಸೀಟ್'ನಲ್ಲಿ ಇರ್ತಾ ಇದ್ದದ್ದು ಬಿಜೆಪಿ. ರಾಜ್ಯದಲ್ಲಿಆಪರೇಷನ್ ಅನ್ನೋ ಪಗಡೆಯಾಟ ಶುರು ಮಾಡಿ, ತನಗೆ ಬೇಕಾದಂತೆ ದಾಳ ಉರುಳಿಸಿ ಗೆದ್ದಿದ್ದ ಕೇಸರಿ ಪಡೆ ಈಗ ಸೈಲೆಂಟಾಗಿ ಆಟ ನೋಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಾಕಿಸ್ತಾನ ಗದ್ದಲ ! ಟಿಕೆಟ್‌ ನೀಡುವ ವಿಚಾರವಾಗಿ ಜಟಾಪಟಿ

Related Video