ಎಪ್ರಿಲ್ 28 ರಿಂದ ಕರ್ನಾಟಕದಲ್ಲಿ ಮೋದಿ ಪ್ರಚಾರ ಆರಂಭ, ಯೋಗಿ ಆದಿತ್ಯನಾಥ್ ಸಾಥ್!
ರಾಜ್ಯದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಸೇರಿದಂತೆ ಘಟಾನುಘಟಿಗಳ ಪ್ರಚಾರ, ಡಿಕೆ ಶಿವಕುಮಾರ್‌ಗೆ ನಾಮಪತ್ರ ತಿರಸ್ಕೃತವಾಗುವ ಆತಂಕ, ಕೊನೆಯ ದಿನ ರೋಚಕ ಟ್ವಿಸ್ಟ್, ಕನಕಪುರದಿಂದ ಡಿಕೆ ಸುರೇಶ್ ನಾಮಪತ್ರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಎಪ್ರಿಲ್ 28 ರಿಂದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಬರೋಬ್ಬರಿ 20 ರ್ಯಾಲಿ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಕರ್ನಾಟಕದ ಒಂದೊಂದು ಭಾಗದಲ್ಲಿ ಸಮಾವೇಶ, ರೋಡ್ ಶೋಗಳನ್ನು ಆಯೋಜಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇದರ ಜೊತೆಗೆ ರಾಜ್ಯಕ್ಕೆ ಅಮಿತ್ ಶಾ, ಹಿಂದುತ್ವ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಇತ್ತ ರಾಜ್ಯ ಲಿಂಗಾಯಿತ ನಾಯಕರು ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಕೌಂಟರ್ ನೀಡಲು ಸಜ್ಜಾಗಿದೆ.