ಮಿಷನ್ 123 ಅಂದವರು 19ಕ್ಕೆ ಕುಸಿದದ್ದು ಹೇಗೆ?: ಗೌಡರ ಭದ್ರಕೋಟೆ ಛಿದ್ರ ಮಾಡಿದ್ದು ಬಂಡೆನಾ.. ಬಿಜೆಪಿನಾ..?
ಜೆಡಿಎಸ್ ಕಿಂಗ್ ಮೇಕರ್ ಆಗತ್ತೆ, ನಾನೇ ಮತ್ತೆ ಮುಖ್ಯಮಂತ್ರಿಯಾಗ್ತೀನಿ ಅಂತ ಕನಸು ಕಾಣ್ತಿದ್ದ ಕುಮಾರಸ್ವಾಮಿಯವರಿಗೆ ಚುನಾವಣೆಯಲ್ಲಿ ಭಾರೀ ನಿರಾಸೆಯಾಗಿದೆ. ಯಾಕಂದ್ರೆ ಈ ಬಾರಿ ಜೆಡಿಎಸ್ ಕೇವಲ 19 ಸೀಟು ಮಾತ್ರ ಗೆದ್ದಿದೆ.
ಮಿಷನ್ 123 ಮೇಲೆ ಗುರಿ ಇಟ್ಟಿದ್ದ ದಳಪತಿಗಳಿಗೆ ಸಿಕ್ಕಿದ್ದು ಕೇವಲ 19 ಸೀಟು. ಆ 19 ಸೀಟುಗಳ ಬೆನ್ನಲ್ಲೇ ಜೆಡಿಎಸ್'ಗೀಗ ಅಸ್ತಿತ್ವದ ಭಯ ಕಾಡ್ತಿದೆ. ಒಕ್ಕಲಿಗರ ಭದ್ರಕೋಟೆಯಲ್ಲೇ ಛಿದ್ರವಾಗಿ ಹೋಗಿರೋ ದಳಪತಿಗಳನ್ನು ಕಾಡ್ತಿರೋ ಭಯದ ಫ್ಯಾಕ್ಟರ್ ಕನಕಪುರ ಬಂಡೆ. ಒಂದ್ಕಡೆ ಬಂಡೆ ಅಬ್ಬರ, ಮತ್ತೊಂದ್ಕಡೆ ಬಿಜೆಪಿಯ ನಿಗೂಢ ಹೆಜ್ಜೆ. ಹಾಗಾದ್ರೆ ಜೆಡಿಎಸ್'ಗೆ ಕಂಟಕ ಕಟ್ಟಿಟ್ಟ ಬುತ್ತಿನಾ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. ಒಕ್ಕಲಿಗರ ಕೋಟೆ ಭೇದಿಸಿ ಕಾಂಗ್ರೆಸ್'ಗೆ ಭರ್ಜರಿ ಗೆಲುವು ತಂದುಕೊಟ್ಟ ಕನಕಪುರದ ರಣಬೇಟೆಗಾರ. ಅದೇ ರಣಬೇಟೆಗಾರನೀಗ ಕೆಪಿಸಿಸಿ ಅಧ್ಯಕ್ಷ ಅಷ್ಟೇ ಅಲ್ಲ, ರಾಜ್ಯದ ಉಪಮುಖ್ಯಮಂತ್ರಿ ಕೂಡ ಹೌದು. ಚುನಾವಣೆಗೂ ಮೊದ್ಲು ಬಂಡೆ ಕೈಯಲ್ಲಿ ಒಂದೇ ಅಧಿಕಾರ. ಆದ್ರೆ ಈಗ ಎರಡೂ ಕೈಯಲ್ಲೂ ಅಧಿಕಾರ. ಸಿದ್ದರಾಮಯ್ಯ ಸರ್ಕಾರದಲ್ಲಿ ಮೋಸ್ಟ್ ಪವರ್"ಫುಲ್ ನಂ.2 ಸ್ಥಾನ ಡಿ.ಕೆ. ಶಿವಕುಮಾರ್‌ಗೆ ಸಿಕ್ಕಿದೆ.
ಇದನ್ನೂ ವೀಕ್ಷಿಸಿ: ಕರುನಾಡ ಯುದ್ಧವೀರರ ಮುಂದೆ ಟಾರ್ಗೆಟ್ 7 ಚಾಲೆಂಜ್: ದಕ್ಷಿಣಾಪಥೇಶ್ವರರ ದಂಡಯಾತ್ರೆಗೆ ರೆಡಿಯಾಗಿದೆ ರಣವ್ಯೂಹ !