ಕರ್ನಾಟಕ ಕುರುಕ್ಷೇತ್ರ ಅಖಾಡಕ್ಕೆ 'ನಮೋ' ಎಂಟ್ರಿ: ಇಂದು ಮೈಸೂರು ಭಾಗದಲ್ಲಿ ಮತಬೇಟೆ

ಇಂದು ಜನಸಾಗರದ ಮಧ್ಯೆ ಮೋದಿ ಮಿಂಚಿನ ಸಂಚಾರ
ನಿನ್ನೆ ಉತ್ತರ ಕರ್ನಾಟಕ, ಇಂದು ಮೈಸೂರಿನಲ್ಲಿ ಪ್ರಚಾರ
ಎರಡನೇ ಬಾರಿಗೆ ಕೋಲಾರಕ್ಕೆ ಪ್ರಧಾನಿ ಮೋದಿ ಭೇಟಿ

Share this Video
  • FB
  • Linkdin
  • Whatsapp

ಮೈಸೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಇಂದು ಸಹ ಪ್ರಧಾನಿ ಮೋದಿ ಎಂಟ್ರಿ ಕೊಡಲಿದ್ದು, ಹಳೇ ಮೈಸೂರು ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ನಿನ್ನೆ ಉತ್ತರ ಕರ್ನಾಟಕ ಭಾಗದಲ್ಲಿ ಮೋದಿ ಪ್ರಚಾರ ನಡೆಸಿದ್ದು, ಶತಾಯಗತಾಯ 25ಕ್ಕಿಂತ ಹೆಚ್ಚು ಸೀಟು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಭರ್ಜರಿ ರೋಡ್‌ ಶೋ, ಮೂರು ಸಮಾವೇಶ ಜೊತೆಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಕ್ಷೇತ್ರವಾದ ಚನ್ನಪಟ್ಟಣದಲ್ಲೂ ಸಮಾವೇಶ ನಡೆಸಲಿದ್ದಾರೆ. ಕೋಲಾರ, ಬೇಲೂರಿನಲ್ಲೂ ಬೃಹತ್‌ ಸಮಾವೇಶ ನಡೆಸಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಒಟ್ಟಿನಲ್ಲಿ ಜನಸಾಗರದ ನಡುವೆ ಮೋದಿ ಮಿಂಚಿನ ಸಂಚಾರ ನಡೆಸಲಿದ್ದಾರೆ.

Related Video