ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ, ಹಾಗಾಗಿ ತಿರಸ್ಕರಿಸಿದ್ದಾರೆ : ಸಿದ್ದರಾಮಯ್ಯ

ಜನ ಬಿಜೆಪಿ ಭ್ರಷ್ಟಾಚಾರದಿಂದ ಬೇಸತ್ತಿದ್ದರು. ಹಾಗಾಗಿ ಈ ಬಾರಿ ಅವರನ್ನು ಸೋಲಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

First Published May 13, 2023, 3:21 PM IST | Last Updated May 13, 2023, 3:21 PM IST

ಈಗಿನ ಟ್ರೆಂಡ್‌ ನೋಡಿದ್ರೆ, ನಾವು ಸುಮಾರು 130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಪಾರ್ಟಿ ತನ್ನ ಸ್ವಂತ ಶಕ್ತಿಯಿಂದ ಸರ್ಕಾರ ರಚಿಸುತ್ತದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಯಾಕಂದ್ರೆ ಬಿಜೆಪಿ ಸರ್ಕಾರದ 40% ಕಮಿಷನ್‌ ಭ್ರಷ್ಟಚಾರಕ್ಕೆ ಬೇಸತ್ತಿದ್ದಾರೆ. ಮೋದಿ ನಾ ಖಾವುಂಗ, ಖಾನೇ ದುಂಗಾ ಅಂತಾ ಹೇಳಿ ಎಲ್ಲಾ ಕೊಳ್ಳೆ ಹೊಡೆದ್ರು. ಹಾಗಾಗಿ ಜನ ಬೇಸತ್ತಿದ್ದು, ಈ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಬೇಗ ಒಳ್ಳೆಯದು ಎಂದು ಕಾಯುತ್ತಿದ್ದರು. ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ ಎಲ್ಲಾ 150 ಸೀಟ್‌ ಗೆಲ್ಲುತ್ತೀವಿ ಎಂದು ಹೇಳುತ್ತಿದ್ದರು. ಅವರಿಗೆ ಗೊತ್ತಿದ್ರೂ ಕೂಡ ಸುಳ್ಳು ಹೇಳುತ್ತಿದ್ದರು. ಹೇಗಾದ್ರೂ ಮಾಡಿ ಹಣದ ಬಲದಿಂದ ಗೆಲ್ಲಬಹುದು ಅಂದುಕೊಂಡಿದ್ದರು. ಆದ್ರೆ ಜನ ಅವರನ್ನು ತಿರಸ್ಕರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಇದು ಸತ್ಯ-ಅಸತ್ಯದ ನಡುವಿನ ಚುನಾವಣೆ, ನನ್ನ ಕ್ಷೇತ್ರದ ಜನ ಸತ್ಯದ ಪರವಾಗಿದ್ದಾರೆ : ಯು ಟಿ ಖಾದರ್