ಇದು ಸತ್ಯ-ಅಸತ್ಯದ ನಡುವಿನ ಚುನಾವಣೆ, ನನ್ನ ಕ್ಷೇತ್ರದ ಜನ ಸತ್ಯದ ಪರವಾಗಿದ್ದಾರೆ : ಯು ಟಿ ಖಾದರ್

ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ. ಖಾದರ್​​ ಗೆಲುವು ಸಾಧಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಇದು ಸತ್ಯ ಮತ್ತು ಅಸತ್ಯದ ಚುನಾವಣೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ದಕ್ಷಿಣ ಕನ್ನಡ: ಸತತವಾಗಿ ಗೆಲುವು ಕಂಡಿರುವ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಈ ಬಾರಿಯೂ ಬಹುಮತದಿಂದ ಗೆದ್ದಿದ್ದಾರೆ. ಜೆಡಿಎಸ್​​ ಅಭ್ಯರ್ಥಿ ಮೊಯಿನುದ್ದೀನ್​​ ಬಾವಾ ಈ ಬಾರಿ ಪ್ರಬಲ ಸ್ಪರ್ಧಿಯಾಗಿದ್ದು ಸೋತಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿಯಾಗಿ ಸತೀಶ್ ಕುಂಪಲ ಸ್ಪರ್ಧಿಸುತ್ತಿದ್ದು ಅವರು ಸಹ ಸೋತಿದ್ದಾರೆ. ಮತ್ತೆ 5ನೇ ಬಾರಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಗೆಲುವಿನ ಬಗ್ಗೆ ಯು.ಟಿ. ಖಾದರ್‌ ಮಾತನಾಡಿ, ಇದು ಸತ್ಯ ಮತ್ತು ಅಸತ್ಯದ ಚುನಾವಣೆ. ಜ್ಞಾನ ಮತ್ತು ಅಜ್ಞಾನದ ಚುನಾವಣೆಯಲ್ಲಿ ಜನರು ಜ್ಞಾನದ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್‌ನನ್ನು ಗೆಲ್ಲಿಸಿದ್ದಾರೆ. ಯಾರು ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಅವರು ಸೋಲನ್ನು ಅನುಭವಿಸಿದ್ದಾರೆ. ಇಲ್ಲಿ ಸಮಾನತೆಯ ಸಮಾಜ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಮಂಗಳೂರಿನ ಅಭಿವೃದ್ಧಿಗೆ ಏನೇನು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕೋ, ಅದನ್ನು ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ವಿರೋಧ ಪಕ್ಷವಾಗಿ ನಾವು ಉತ್ತಮ ಕೆಲಸ ಮಾಡುತ್ತೇವೆ : ಶೋಭಾ ಕರಂದ್ಲಾಜೆ

Related Video