ಮಲೆನಾಡಿನಲ್ಲಿ ಅರಮನೆಯಂತಹ ಮತದಾನ ಕೇಂದ್ರ: ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು!
ಶಿವಮೊಗ್ಗದಲ್ಲಿ ಅರಮನೆಯಂತಹ ಮತದಾನ ಕೇಂದ್ರ ನಿರ್ಮಿಸಲಾಗಿದ್ದು, ವೋಟ್ ಹಾಕಿ ಮತದಾರರು ಸಿಂಹಾಸನವೇರಿದರು. ವೋಟ್ ಮಾಡಲು ಬರುವವರಿಗೆ ರೆಡ್ ಕಾರ್ಪೆಟ್‌ನನ್ನು ಸಹ ಅಧಿಕಾರಿಗಳು ಹಾಕಿದ್ದಾರೆ.
ಶಿವಮೊಗ್ಗ: ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ವಿನೂತನ ಪ್ರಯತ್ನ ಮಾಡಲಾಗಿದ್ದು, ಅರಮನೆಯಂತಹ ಮತದಾನದ ಕೇಂದ್ರ ಶಿವಮೊಗ್ಗದಲ್ಲಿ(Shivamogga)ರೆಡಿಯಾಗಿದೆ. ವೋಟ್(Vote) ಹಾಕಿ ಮತದಾರರು ಸಿಂಹಾಸನವನ್ನು ಏರಿದರು. ವೋಟ್ ಮಾಡಲು ಬರುವವರಿಗೆ ರೆಡ್ ಕಾರ್ಪೆಟ್‌ನನ್ನು ಅಧಿಕಾರಿಗಳು ಹಾಕಿದ್ದಾರೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತಗಟ್ಟೆ(Polling Booth) ಸದ್ಯ ಜಗ ಮಗ ಎನ್ನುತ್ತಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು(Election Officers) ಬಂದಿದ್ದು, ಮತಗಟ್ಟೆ ಬಳಿ ಸಿಂಹಾಸನ ಹಾಗೂ ಕಿರೀಟವನ್ನು ಸಿಬ್ಬಂದಿ ಇಟ್ಟಿದ್ದಾರೆ. ಚುನಾವಣಾ ಅಧಿಕಾರಿಗಳ ಪ್ರಯತ್ನಕ್ಕೆ ಮತದಾರರು ಫುಲ್ ಖುಷ್ ಆಗಿದ್ದಾರೆ. ಮತಗಟ್ಟ ಸಂಖ್ಯೆ 283 ರಲ್ಲಿ ಈ ವಿನೂತನ ಪ್ರಯತ್ನ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ: ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದ 17 ಅಭ್ಯರ್ಥಿಗಳು!