ಬೆಲೆ ಏರಿಕೆ ನಡುವೆಯೂ ಮೋದಿ ಮೇಲೆ ಜನರ ಒಲವು, ಇಂದೇ ಚುನಾವಣೆ ಆದರೂ ಮೋದಿಯೇ ಗೆಲ್ಲೋದು!
ತಕ್ಷಣಕ್ಕೆ ದೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ 362 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ
ನರೇಂದ್ರ ಮೋದಿ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸ್ತಾ ಇದ್ದಾರೆ. ಬೆಲೆ ಏರಿಕೆ ವಿಚಾರಕ್ಕೆ ಮೋದಿ ಜನಾಕ್ರೋಶಕ್ಕೂ ಒಳಗಾಗಿದ್ದಾರೆ. ಆದ್ರೆ ಈ ಕೋಪ ತಾಪ ಎಲ್ಲಾ ತಾತ್ಕಾಲಿಕವಾ ಅನ್ನೋ ಪ್ರಶ್ನೆ ಮೂಡುವ ರೀತಿ ಸಮೀಕ್ಷೆಯೊಂದು ವರದಿ ನೀಡಿದೆ. ತಕ್ಷಣಕ್ಕೆ ದೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ 362 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ಯುಪಿಎ ಮೈತ್ರಿಕೂಟ ಕೇವಲ 97 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಇತರೆ ಪ್ರಾದೇಶಿಕ ಪಕ್ಷಗಳು, ಪಕ್ಷೇತರರು 84 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಸೋನಿಯಾ ಗಾಂಧಿ ವಿರುದ್ಧ ಸಿಡಿದೆದ್ದ ಸ್ಕೃತಿ ಇರಾನಿ, ಟಾರ್ಗೆಟ್ ಆಗಿದ್ಯಾಕೆ ಕಾಂಗ್ರೆಸ್ ರಾಜಮಾತೆ.?
‘ಇಂಡಿಯಾ ಟೀವಿ’ ನಡೆಸಿದ ‘ವಾಯ್ಸ್ ಆಫ್ ದ ನೇಷನ್’ ಸಮೀಕ್ಷೆಯಲ್ಲಿ ಈ ಅಂಕಿ ಅಂಶಗಳಿವೆ. ಜು.11ರಿಂದ 24ರ ಅವಧಿಯಲ್ಲಿ ದೇಶದ 543 ಲೋಕಸಭಾ ಸ್ಥಾನಗಳ ಪೈಕಿ 136ರಲ್ಲಿ 34000 ಜನರನ್ನು ಸಂದರ್ಶಿಸಿ ಸಮೀಕ್ಷೆ ವರದಿ ತಯಾರಿಸಲಾಗಿದೆ. ಸಮೀಕ್ಷೆ ಅನ್ವಯ ಎನ್‌ಡಿಎ ಶೇ.41, ಯುಪಿಎ ಶೇ.28 ಮತ್ತು ಇತರರು ಶೇ.31ರಷ್ಟುಮತ ಪಡೆದುಕೊಳ್ಳಲಿದ್ದಾರೆ.
ಮೋದಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕು ಅಂತ ಕಾಂಗ್ರೆಸ್ ಸರ್ಕಸ್ ಮಾಡುತ್ತಲೇ ಇದೆ. ಆದ್ರೆ ಅದೊಂದು ಸಂಕಲ್ಪ ಆಗ್ತಾನೆ ಇಲ್ಲಾ.. ಮೋದಿಯನ್ನ ಸೋಲಿಸೋಕೆ ಒಂದಿಷ್ಟು ಅಂಶಗಳು ಎದುರಾಳಿಗಳ ಕೈಲಿ ಇದ್ದೇ ಇದೆ. ಏನದು..? ಇಲ್ಲಿದೆ ನೋಡಿ.