
ಸೋನಿಯಾ ಗಾಂಧಿ ವಿರುದ್ಧ ಸಿಡಿದೆದ್ದ ಸ್ಮೃತಿ ಇರಾನಿ, ಟಾರ್ಗೆಟ್ ಆಗಿದ್ಯಾಕೆ ಕಾಂಗ್ರೆಸ್ ರಾಜಮಾತೆ?
ಸ್ಮೃತಿ ಇರಾನಿ ಮಾತಿಗೆ ಕಾಂಗ್ರೆಸ್ ನಾಯರು ಬೆವತಿದ್ದಾರೆ. ಕ್ಷಮೆ ಕೇಳಲು ಆಗ್ರಹಿಸಿದ ಬೆನ್ನಲ್ಲೇ ಅಧೀರ್ ರಂಜನ್ ಚೌಧರಿ ಕ್ಷಮೆ ಯಾಚಿಸಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಬಿಜೆಪಿ ಕೆರಳಿ ಕೆಂಡಾಮಂಡಲವಾಗಿದೆ. ಸದನದಲ್ಲಿ ಬಿಜೆಪಿ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಅಧೀರ್ ರಂಜನ್ ಮಾತ್ರವಲ್ಲ, ಸೋನಿಯಾ ಗಾಂಧಿ ಕೂಡ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಅಧೀರ್ ರಂಜನ್ ಕ್ಷಮೆ ಕೇಳಿದ್ದರೆ, ಸೋನಿಯಾ ಮೌನಕ್ಕೆ ಜಾರಿದ್ದಾರೆ.