ಸದ್ಯಕ್ಕೆ ‘ನೋ ಆಪರೇಷನ್’.. ರಾಜಕೀಯದ ಕತೆ ಮುಂದೇನು..?

ಕಾಂಗ್ರೆಸ್‌ನಿಂದ ಉದ್ಭವಿಸಿದೆ ಆಪರೇಷನ್ ಬಿರುಗಾಳಿ!
ಕಮಲ ಬಿಟ್ಟು ಕೈ ಹಿಡಿತಾರಾ ಹಾಲಿ ಶಾಸಕರು..?
ನಿಗೂಢ ರಾಜಕಾರಣದ ಹಿಂದೆ ರಹಸ್ಯ ಕಾರ್ಯಾಚರಣೆ!
 

Share this Video
  • FB
  • Linkdin
  • Whatsapp

ರಾಜ್ಯದಲ್ಲಿರೋದು ಕಾಂಗ್ರೆಸ್ ಸರ್ಕಾರ.. ಅದೇನು ಸರಳ ಬಹುಮತದ್ದಲ್ಲ.. ಭರ್ಜರಿ 135 ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿ, ಅಸ್ತಿತ್ವಕ್ಕೆ ಬಂದಿದೆ. ಹಾಗಿದ್ದೂ ಕೂಡ ಆಗೊಮ್ಮೆ ಈಗೊಮ್ಮೆ ಆಪರೇಷನ್ ಭೂತ ಕಾಂಗ್ರೆಸ್‌ನ ಕಾಡ್ತಾ ಇತ್ತು. ಆದ್ರೆ ಆ ಭೂತೋಚ್ಛಾಟನೆಗೆ ಕಾಂಗ್ರೆಸ್(Congress) ಮುಂದಾಗಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ಗೆ ಈಗ ಆಪರೇಷನ್(operation) ಮಾಡೋಕೆ ಹೊರಟಂತಿದೆ. ಈಗಷ್ಟೇ ಸಿದ್ದರಾಮಯ್ಯ( ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಶತದಿನಾಚರಣೆ ಪೂರೈಸಿದೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ಪ್ರಭಾವ ಹೆಚ್ಚಾಗ್ತಲೇ ಇದೆ. ತಾನು ಗೆದ್ದರೆ ಏನೇನು ಕೊಡ್ತೀನಿ ಅಂತ ಕಾಂಗ್ರೆಸ್ ಹೇಳಿತ್ತೋ, ಆ ಗ್ಯಾರಂಟಿಗಳಲ್ಲಿ, ಒಂದೆರಡು ಬಿಟ್ರೆ ಮಿಕ್ಕಿದ್ದೆಲ್ಲಾ ಜಾರಿಯಾಗಿದೆ. ಆದ್ರೆ, ಈಗಲೂ ಬಿಜೆಪಿ ಮಾತ್ರ, ವಿರೋಧ ಪಕ್ಷದ ನಾಯಕರನ್ನೂ ಆಯ್ಕೆ ಮಾಡಿಲ್ಲ. ಇದೊಂದು ಆಧಾರದ ಮೇಲೆನೇ, ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸ್ತಾ ಇದೆ.

ಇದನ್ನೂ ವೀಕ್ಷಿಸಿ: ಬಿಜೆಪಿಗೆ ಮತ್ತೊಂದು ಶಾಕ್‌: ಸೆಕೆಂಡ್ ಲೈನ್ ಲೀಡರ್ಸ್ ಪಕ್ಷಾಂತರಕ್ಕೆ ಕಾರಣ ಏನು..?

Related Video