ಬಿಜೆಪಿಗೆ ಮತ್ತೊಂದು ಶಾಕ್: ಸೆಕೆಂಡ್ ಲೈನ್ ಲೀಡರ್ಸ್ ಪಕ್ಷಾಂತರಕ್ಕೆ ಕಾರಣ ಏನು..?
ವಿಧಾನಸಭೆಯಲ್ಲಿ ಸೋತ ಬಿಜೆಪಿಗೆ ಮತ್ತೊಂದು ಶಾಕ್ ..?
ಸೆಕೆಂಡ್ ಲೈನ್ ಲೀಡರ್‌ಶಿಪ್ ಮಹತ್ವ ಅರಿತಿರುವ ಕಾಂಗ್ರೆಸ್
ಲೋಕಸಭೆ ಚುನಾವಣೆಗೆ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್
ಬಿಜೆಪಿ ನಾಯಕರ ಪಕ್ಷಾಂತರ ಬಿರುಗಾಳಿ ಮಧ್ಯೆ ಮತ್ತೊಂದು ಶಾಕ್ ಎದುರಾಗಿದೆ. ಪಕ್ಷದ ಸೆಕೆಂಡ್ ಲೈನ್ ಲೀಡರ್ಸ್ ಬಿಜೆಪಿಯನ್ನು(BJP) ತೊರೆಯುತ್ತಿದ್ದಾರೆ. ಬಿಜೆಪಿ ಮಾಡಿಕೊಂಡ ಆ ಯಡವಟ್ಟಿನಿಂದಲೇ ಪಕ್ಷ ತೊರೆಯುತ್ತಿದ್ದಾರಾ ಎಂಬ ಅನುಮಾನ ಸಹ ಇದೀಗ ಮೂಡುತ್ತಿದೆ. ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಿಜೆಪಿ ನಡೆಸಲಿಲ್ಲ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಚುನಾವಣೆಗಳನ್ನ ಬಿಜೆಪಿ ನಡೆಸಿಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್‌ನತ್ತ(Congress) ಸೆಕೆಂಡ್ ಲೈನ್ ಲೀಡರ್ಸ್ ವಲಸೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ಕೈಯಲ್ಲಿ ಬಿಬಿಎಂಪಿ ಚುನಾವಣೆ (BBMP Election) ಮೀಸಲಾತಿ ನಿರ್ಧಾರ ಇದೆ. ಕಾಂಗ್ರೆಸ್ ಸೇರುತ್ತಿರುವವರಿಗೆ ಮೀಸಲಾತಿ ಅನುಕೂಲದ ಭರವಸೆ ನೀಡುವ ಸಾಧ್ಯತೆ ಇದೆ. ವಾರ್ಡ್ ಮೀಸಲಾತಿ ಅನುಕೂಲದ ಬಗ್ಗೆ ಕಾಂಗ್ರೆಸ್ ಭರವಸೆ ನೀಡುತ್ತಿದೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: I.N.D.I.A ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಕಸರತ್ತು..ಈಗಾಗಲೇ ಅಭ್ಯರ್ಥಿ ಘೋಷಿಸಿದ ಎಸ್‌ಪಿ