
ಬಿಜೆಪಿ ನಾಯಕರನ್ನು ಸೆಳೆಯಲು ಆಪರೇಷನ್ "ಹಸ್ತ": ಶೆಟ್ಟರ್-ಸವದಿ ನೇತೃತ್ವದಲ್ಲಿ ಆಟ ಶುರು !
ಲೋಕಯುದ್ಧಕ್ಕೆ “20”ರ ಗುಮ್ಮ ಬಿಟ್ಟ “ಬೇಟೆಗಾರ” ಜೋಡಿ..!
ಯಾರೆಲ್ಲಾ ಟಾರ್ಗೆಟ್..? ಕೈ ಖೆಡ್ಡಾಗೆ ಬಿದ್ದವರು ಯಾರು ಗೊತ್ತಾ..?
ಹೇಗಿದೆ ಭಲೇ ಜೋಡಿಯ ಆಪರೇಷನ್ ಹಸ್ತದ ಮಾಸ್ಟರ್'ಪ್ಲಾನ್..?
ಕರ್ನಾಟಕ ಕುರುಕ್ಷೇತ್ರದ ಪ್ರಚಂಡ ವಿಜಯದ ನಂತರ ಕಾಂಗ್ರೆಸ್(Congress) ಟಾರ್ಗೆಟ್ ಮಹಾಭಾರತ ಮಹಾಯುದ್ಧ. ಮಹಾವೀರ ಮೋದಿ ವಿರುದ್ಧದ ಮಹಾಯುದ್ಧಕ್ಕೆ ರೋಚಕ ರಣವ್ಯೂಹ ಹೆಣೆಯುತ್ತಿದೆ ಕರ್ನಾಟಕ ಕಾಂಗ್ರೆಸ್ ಪಾಳೆಯ. ಆ ರಣವ್ಯೂಹದ ಹೆಸರು ಆಪರೇಷನ್ ಸಿಕ್ಸ್ಟೀನ್, ಕೈ ತೂಫಾನ್. ಆ ತೂಫಾನ್'ನ ಸೂತ್ರಧಾರಿಗಳಿಬ್ಬರು ಈ ಹಿಂದೆ ಬಿಜೆಪಿಯ(BJP) ಶಕ್ತಿಗಳಾಗಿದ್ದವರು. ಸಿದ್ದರಾಮಯ್ಯನವರ(Siddaramaiah) ಬಾಯಲ್ಲೂ ಇಪ್ಪತ್ತರ ಶಪಥ, ಡಿಕೆ ಶಿವಕುಮಾರ್ (DK Shivakumar) ಅವರ ಬಾಯಲ್ಲೂ ಇಪ್ಪತ್ತರ ಪ್ರತಿಜ್ಞೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಕಾ 136 ಸೀಟುಗಳನ್ನು ಗೆಲ್ತೀವಿ ಅಂತ ಹೇಳಿ, ಕೊನೆಗೆ ಅಂದುಕೊಂಡದ್ದನ್ನು ಮಾಡಿ ತೋರಿಸಿದ ಭಲೇ ಜೋಡಿಯೀಗ ಅಂಥದ್ದೇ ಮತ್ತೊಂದು ಪ್ರತಿಜ್ಞೆ ಮಾಡಿದೆ. ಈ ಬಾರಿ ಕೈ ಜೋಡೆತ್ತುಗಳ ಟಾರ್ಗೆಟ್ ಮಹಾಭಾರತ ಮಹಾಯುದ್ಧ. ಅಂದ್ರೆ 2024ರ ಲೋಕಸಭಾ ಚುನಾವಣೆ(loksabha election). ಲೋಕಯುದ್ಧದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳ್ತಿದ್ದಾರೆ. ಹೇಳ್ತಿರೋದಷ್ಟೇ ಅಲ್ಲ, ಹೈಕಮಾಂಡ್"ಗೆ ಮಾತು ಕೊಟ್ಟು ಬಂದಿದ್ದಾರೆ.
ಇದನ್ನೂ ವೀಕ್ಷಿಸಿ: ವಿಡಿಯೋ ಚಿತ್ರೀಕರಣ ಸ್ಥಳದಲ್ಲಿ ಮರುಸೃಷ್ಟಿ: ಆಳೆತ್ತರದ ಗೊಂಬೆ ಇಟ್ಟು ಸೀನ್ ರೀ ಕ್ರಿಯೇಟ್ !