ವಿಡಿಯೋ ಚಿತ್ರೀಕರಣ ಸ್ಥಳದಲ್ಲಿ ಮರುಸೃಷ್ಟಿ: ಆಳೆತ್ತರದ ಗೊಂಬೆ ಇಟ್ಟು ಸೀನ್ ರೀ ಕ್ರಿಯೇಟ್ !
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣದಲ್ಲಿ ಸಿಐಡಿ ಪೊಲೀಸರು ಹೇಳಿಕೆಗಳ ಬೆನ್ನುಬಿದ್ದಿದ್ದಾರೆ. ಉಡುಪಿ ಪೊಲೀಸರು ದಾಖಲಿಸಿರುವ ಹೇಳಿಕೆಗಳನ್ನು ಹಸ್ತಾಂತರ ಮಾಡಿಕೊಂಡಿದ್ದು, ತನಿಖೆ ತೀವ್ರ ಗೊಳಿಸಿದ್ದಾರೆ. ಈ ನಡುವೆ ತನಿಖಾಧಿಕಾರಿ ಅಂಜುಮಾಲಾ ನಾಯಕ್, ಜೆಎಂಎಫ್ ಸಿ ಕೋರ್ಟಿಗೆ ತೆರಳಿ ಸಂತ್ರಸ್ತೆ ಮತ್ತು ವಿದ್ಯಾರ್ಥಿನಿಯರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಹಿಂದೂ ವಿದ್ಯಾರ್ಥಿನಿ ವಿಡಿಯೋ ಚಿತ್ರೀಕರಣ ಪ್ರಕರಣ ಸಿಐಡಿಗೆ ಹಸ್ತಾಂತರ ಬೆನ್ನಲ್ಲೇ ನಾಲ್ಕು ದಿನಗಳಿಂದ ಉಡುಪಿಯಲ್ಲಿ ಬೀಡು ಬಿಟ್ಟಿರುವ ಸಿಐಡಿ ತನಿಖಾ ಟೀಂ ಪ್ರಕರಣದ ಸಾಕ್ಷ್ಯ ಸಂಗ್ರಹ ನಡೆಸುತ್ತಿದೆ. ವಿದ್ಯಾರ್ಥಿಗಳು ನೇತ್ರಾ ಜ್ಯೋತಿ ಕಾಲೇಜು ಆಡಳಿತ ಮಂಡಳಿಗೆ ಬರೆದುಕೊಟ್ಟ ತಪ್ಪೊಪ್ಪಿಗೆ ಪತ್ರ, ಮಲ್ಪೆ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ, ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ಬೆಳ್ಳಿಯಪ್ಪ ದಾಖಲಿಸಿದ ಹೇಳಿಕೆಗಳ ಪ್ರತಿಯನ್ನು ಸಿಐಡಿ ಪಡೆದುಕೊಂಡಿದೆ. ಇನ್ನು ಆರೋಪ ಹೊತ್ತ ಮೂವರು ವಿದ್ಯಾರ್ಥಿನಿಯರು(Students) ನಿರೀಕ್ಷಣಾ ಜಾಮೀನು ಪಡೆಯುವ ಸಂದರ್ಭ ಕೋರ್ಟ್ ಮುಂದೆ ಘಟನೆಯ ಬಗ್ಗೆ ವಿವರಿಸಿದ್ದರು. ಇನ್ನು ಇನ್ಸ್ಪೆಕ್ಟರ್ ಬೆಳ್ಳಿಯಪ್ಪ ಸಂತ್ರಸ್ತ ವಿದ್ಯಾರ್ಥಿನಿ ಹೇಳಿಕೆಯನ್ನು ಕೋರ್ಟ್ ಮುಂದೆ ದಾಖಲು ಮಾಡಿದ್ದರು. ಈ ಎಲ್ಲಾ ಹೇಳಿಕೆಯ ದಾಖಲೆ ಪ್ರತಿಗಳನ್ನು ಸಿಐಡಿ(CID) ಪಡೆದುಕೊಂಡಿದೆ. ಚಿತ್ರೀಕರಣ ಮಾಡಿರೋದು ಹೌದು, ಅದನ್ನು ಡಿಲೀಟ್ ಮಾಡಿರೋದು ಹೌದು ಎಂದು ದಾಖಲೆ ಮೂಲಕ ಹೇಳಿರುವುದು ಕೂಡಾ ಪ್ರಮುಖ ಸಾಕ್ಷಿಯಾಗಲಿದೆ. ಖುದ್ದು ಸಿಐಡಿ ಎಡಿಜಿಪಿ ಮನೀಶ್ ಪ್ರಕರಣದ ತನಿಖಾ ಪ್ರಗತಿಯ ಮಾಹಿತಿ ಪಡೆದಿದ್ದಾರೆ. ಲೇಡಿಸ್ ಟಾಯ್ಲೆಟ್‌ನಲ್ಲಿ(Ladies toilet) ಹಿಂದು ವಿದ್ಯಾರ್ಥಿನಿಯ ವಿಡಿಯೋ(Hindu girls video case) ಚಿತ್ರೀಕರಣದ ಸ್ಪಷ್ಟತೆ ಪಡೆಯಲು ಸಿಐಡಿ ತನಿಖಾ ಟೀಂ ಘಟನೆಯ ಮರುಸೃಷ್ಟಿಗೆ ಮುಂದಾಗಿದೆ. ಆಳೆತ್ತರದ ಗೊಂಬೆಯನ್ನು ತಂದು ಟಾಯ್ಲೆಟ್ನ ಒಳಗಿರಿಸಿ, ಫೋಟೋ ತೆಗೆಸಿ ಕ್ರಾಸ್ ಚೆಕ್ ಮಾಡಿದ್ದಾರೆ. ಈ ಮೂಲಕ ಜುಲೈ 18 ರಂದು ನಡೆದ ಘಟನೆಯ ಮರು ಸೃಷ್ಟಿ ಮಾಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಅಥ್ಲೆಟಿಕ್ ಆಟಗಾರ ಇಂದು ಕೋಟಿ ರೂಪಾಯಿ ಒಡೆಯ: ಕೋಟೆನಾಡ ಜನರ ಮನಗೆದ್ದ ಯುವ ಉದ್ಯಮಿ !