ಆಪರೇಷನ್ ಸುಳಿವು ನೀಡಿದ ಸಿಎಂ: ಜೆಡಿಎಸ್ ಭದ್ರಕೋಟೆಯಲ್ಲೇ ಡಿನ್ನರ್ ಮೀಟಿಂಗ್ !

ಹಾಸನಾಂಬೆ ದರ್ಶನ ಮಾಡಲಿರುವ ಜೆಡಿಎಸ್ ನಾಯಕರು
ಎಚ್‌ಡಿಕೆ ನೇತೃತ್ವದಲ್ಲಿ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ 
ಹಾಸನಾಂಬೆ ದರ್ಶನದ ಬಳಿಕ ಎಚ್ಡಿಕೆ ಡಿನ್ನರ್ ಮೀಟಿಂಗ್

First Published Nov 7, 2023, 12:24 PM IST | Last Updated Nov 7, 2023, 12:24 PM IST

ಡಿ.ಕೆ. ಶಿವಕುಮಾರ್‌ ಬಳಿಕ ಸಿಎಂ ಸಿದ್ದರಾಮಯ್ಯರಿಂದ ಆಪರೇಷನ್ ಸುಳಿವು ನೀಡಲಾಗಿದೆ. ‘ಯಾರೇ ಬಂದರೂ ಕಾಂಗ್ರೆಸ್(Congress) ಪಕ್ಷಕ್ಕೆ ಸೇರಿಸಿಕೊಳ್ತೀವಿ’. ‘BJP ಮತ್ತು ಜೆಡಿಎಸ್‌ನಿಂದ(JDS) ಬಹಳಷ್ಟು ಜನ‌ ಬರ್ತಾರೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಜೆಡಿಎಸ್ ಕೌಂಟರ್ ಕೊಟ್ಟಿದ್ದು, ಸಿದ್ದರಾಮಯ್ಯ(Siddaramaiah) ಹೇಳಿಕೆ ಬೆನ್ನಲ್ಲೇ ದಳಪತಿಗಳು ಎಚ್ಚೆತ್ತಿದ್ದಾರೆ. ಹಾಸನಾಂಬೆ ದರ್ಶನದ( Hassanambe darshan) ನೆಪದಲ್ಲಿ ದಳಪತಿಗಳು ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಆಮಿಷಗಳಿಗೆ ಬಲಿಯಾಗದಂತೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಯತ್ನ ನಡೆಸಲಾಗುತ್ತಿದೆ. ಜೆಡಿಎಸ್ ಭದ್ರಕೋಟೆಯಲ್ಲೇ ಡಿನ್ನರ್ ಮೀಟಿಂಗ್ ನಡೆಸಲಾಗುತ್ತಿದ್ದು, ಹಾಸನಕ್ಕೆ ಬರುವಂತೆ ಎಲ್ಲಾ ಶಾಸಕರಿಗೆ ಸೂಚನೆಯನ್ನು ಹೆಚ್‌.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಊಟದ ನೆಪದಲ್ಲಿ ಎಲ್ಲಾ ಶಾಸಕರ ಜೊತೆ ಕುಮಾರಸ್ವಾಮಿ ಮೀಟಿಂಗ್ ನಡೆಸಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ, ಮೈತ್ರಿ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ರೈತನಿಗೆ ಮಹಾ ಮೋಸ ಮಾಡಿದ ಬ್ಯಾಂಕ್ ಮ್ಯಾನೇಜರ್: 3 ವರ್ಷಗಳ ಬಳಿಕ ಮನೆಗೆ ಬಂದಿತ್ತು ನೋಟಿಸ್..!

Video Top Stories