Asianet Suvarna News Asianet Suvarna News

ರೈತನಿಗೆ ಮಹಾ ಮೋಸ ಮಾಡಿದ ಬ್ಯಾಂಕ್ ಮ್ಯಾನೇಜರ್: 3 ವರ್ಷಗಳ ಬಳಿಕ ಮನೆಗೆ ಬಂದಿತ್ತು ನೋಟಿಸ್..!

ಬ್ಯಾಂಕ್‌ನಿಂದ ಪಡೆದಿರೋ ಸಾಲ ಸರಿಯಾಗಿ ತುಂಬಿ ಋಣ ಮುಕ್ತರಾಗಿರೋಣ ಅಂತಾ ಅಲ್ಲೊಬ್ಬ ರೈತ ನಿಯತ್ತಿನಿಂದ ಬ್ಯಾಂಕ್‌ಗೆ ಸಾಲದ ಹಣ ಮರುಪಾವತಿಸಿದ್ರೆ. ರೈತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್ ಮ್ಯಾನೇಜರೊಬ್ಬ ಮಹಾ ಮೋಸ ಮಾಡಿದ್ದಾನೆ. 
 

ಮಹದೇವಪ್ಪ ಜೋಗಿನ್ ಕೈಯಲ್ಲಿ ಹಣ ಇಲ್ದೆ, ಟ್ರ್ಯಾಕ್ಟರ್ ಕಂತು ತುಂಬೋದಕ್ಕಾಗ್ದೆ ರೈತ(Farmer) ಮಹದೇವಪ್ಪ ಕಂಗಾಲಾಗಿದಾರೆ. ರೈತ ಮಹದೇವಪ್ಪ ಸ್ಥಿತಿಗೆ ಕಾರಣ ಲಕ್ಕುಂಡಿ ಕೆನರಾ ಬ್ಯಾಂಕ್ ಮ್ಯಾನೇಜರ್. 2018ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ(Canara bank) ಸಾಲ ಪಡೆದು ಅದೇ ವರ್ಷ ಪೂರ್ಣ ಪ್ರಮಾಣದಲ್ಲಿ ಪರುಪಾವತಿಸಿದ್ರು. ಆದ್ರೆ ಮಹದೇವಪ್ಪ ಬಳಿ ಹಣ ಇಸ್ಕೊಂಡಿದ್ದ ಆಗಿನ ಬ್ಯಾಂಕ್ ಮ್ಯಾನೇಜರ್ ರಂಗಪ್ಪ ತನ್ನ ಜೇಬಿಗೆ ಇಳಿಸಿಕೊಂಡಿದ್ದಾನೆ. 2018 ರಲ್ಲಿ ಮಹದೇವಪ್ಪ ಕುಟುಂಬ ಕೆನರಾ ಬ್ಯಾಂಕ್ ನಿಂದ 2 ಲಕ್ಷ ರೂಪಾಯಿ ಸಾಲ ಪಡೆದಿತ್ತು. ನಂತ್ರ ಪಿಎಲ್ಡಿ ಬ್ಯಾಂಕ್ನಿಂದ ಹಣ ಪಡೆದು ಟ್ರ್ಯಾಕ್ಟರ್(Tractor) ಖರೀದಿಗೆ ಮಹದೇವಪ್ಪ ಕುಟುಂಬ ನಿರ್ಧಿಸಿತ್ತು. ಇದಕ್ಕಾಗಿ ಕೆನರಾ ಬ್ಯಾಂಕ್‌ನಕಲ್ಲಿದ್ದ ಸಾಲ ತೀರಿಸಬೇಕಿತ್ತು. ಬ್ಯಾಂಕ್ ಸಾಲ ಕ್ಲೀಯರ್ ಮಾಡಲು ಹೋದ ರೈತನಿಗೆ ಕೌಂಟರ್ನಲ್ಲಿ ಜನ ಜಾಸ್ತಿ ಇದ್ದಾರೆ. ಹೀಗಾಗಿ ನಾನೇ ದುಡ್ಡು ಕಟ್ಟುತ್ತೇನೆಂದು ಆಗಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದ ರಂಗಪ್ಪ 2 ಲಕ್ಷದ 18 ನೂರು ರೂಪಾಯಿ ಪಡೆದುಕೊಂಡಿದ್ದ. ಮರುದಿನ ಬ್ಯಾಂಕ್ಗೆ ಹೋಗಿದ್ದ ಮಹದೇವಪ್ಪಗೆ ನೋ ಡ್ಯೂ, ನೋ ಲೋನ್ ಸರ್ಟಿಫಿಕೆಟ್ ಕೊಟ್ಟು ಕಳುಹಿಸಿದ್ದ.ಸರ್ಟಿಫಿಕೆಟ್ ಪಡೆದು, ಪಿಎಲ್ ಡಿ ಬ್ಯಾಂಕ್ನಿಂದ ಟ್ರ್ಯಾಕ್ಟರ್ ಸಾಲ ಪಡೆಯಲಾಗಿತ್ತು. ಮೂರು ವರ್ಷದ ನಂತ್ರ ಸಾಲದ ನೋಟಿಸ್ ಬಂದ್ಮೇಲೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಮೋಸ ಹೋಗಿರೋದು ಬೆಳಕಿಗೆ ಬಂದಿದೆ. ಸದ್ಯ ಬ್ಯಾಂಕ್ ಮ್ಯಾನೇಜರ್ ರಂಗಪ್ಪನನ್ನು ಅಮಾನತುಗೊಳಿಸಿದ್ದಾರೆ. ಆದ್ರೆ, ಮಹದೇವಪ್ಪ ಖಾತೆಗೆ ಹಣ ಬಂದಿಲ್ಲ.. ಈ ಬಗ್ಗೆ ಈಗಿನ ಬ್ಯಾಂಕ್ ಮ್ಯಾನೇಜರ್ಗೆ ಕೇಳಿದ್ರೆ ನೀವು ಹಬ್ಬಳ್ಳಿಯ ರಿಜಿನಲ್ ಕಚೇರಿಗೆ ಹೋಗಿ ಕೇಳಿ ಅಂತಿದಾರಂತೆ. 

ಇದನ್ನೂ ವೀಕ್ಷಿಸಿ:  ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್ : ಕಾಂಬೋಡಿಯಾದಲ್ಲಿ ಲಾಕ್ ಆಗಿದ್ದ ಕನ್ನಡಿಗನ ರಕ್ಷಣೆ