Asianet Suvarna News Asianet Suvarna News

ನಿಗಮ ಮಂಡಳಿ‌ ನೇಮಕ ವಿಚಾರದಲ್ಲಿ ಸಿಎಂ ವರ್ಸಸ್ ಡಿಸಿಎಂ..ಇಂದು ಅಂತಿಮಗೊಳ್ಳುತ್ತಾ ನೇಮಕ..?

ಇಂದು ನಡೆಯುವ ಸಭೆ ಬಳಿಕ ಸಿಗಲಿದೆ ಅಂತಿಮ ಚಿತ್ರಣ
ಸುರ್ಜೇವಾಲಾ ಜೊತೆಗಿನ ಸಭೆ ಬಳಿಕ ಅಂತಿಮ ತೀರ್ಮಾನ 
ಬೆಳಗ್ಗೆ 11 ಕ್ಕೆ ರಾಜ್ಯಕ್ಕೆ ಆಗಮಿಸಲಿರುವ ಸುರ್ಜೇವಾಲ

First Published Nov 21, 2023, 10:54 AM IST | Last Updated Nov 21, 2023, 10:54 AM IST

ನಿಗಮ ಮಂಡಳಿ‌ ನೇಮಕ ವಿಚಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ಫೈಟ್‌ ನಡೆಯುತ್ತಿದೆ. ಇಂದು ರಾಜ್ಯಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ(Ranadeep Surjewala) ಆಗಮಿಸುತ್ತಿದ್ದಾರೆ. ಸಿಎಂ, ಡಿಸಿಎಂ ಜೊತೆ ಸುರ್ಜೇವಾಲ ಸಭೆ ನಡೆಸಲಿದ್ದಾರೆ. ನಿಗಮ ಮಂಡಳಿ(Corporation board) ಕಾರ್ಯಕರ್ತರಿಗೋ, ಶಾಸಕರಿಗೋ ಎಂಬ ಗೊಂದಲವಿದ್ದು, ಶಾಸಕರ ಪರವಾಗಿ ಸಿಎಂ ಬ್ಯಾಟಿಂಗ್ ಮಾಡಿದ್ರೆ, ಕಾರ್ಯಕರ್ತರ ಪರ ಡಿಸಿಎಂ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶಾಸಕರ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ(Siddaramaiah) ಫೈನಲ್ ಮಾಡಿದ್ದಾರೆ. ಕಾರ್ಯಕರ್ತರ ಪಟ್ಟಿಗೆ ಡಿಸಿಎಂ ಡಿಕೆ ಶಿವಕುಮಾರ್(DK shivakumar) ಪಟ್ಟು ಹಿಡಿದಿದ್ದಾರೆ. ಪಕ್ಷಕ್ಕಾಗಿ ದುಡಿದವರಿಂದ ನಮಗೆ ಅಧಿಕಾರ ಕೊಡಿ ಎಂದು  ಒತ್ತಾಯ ಕೇಳಿಬರುತ್ತಿದೆ. 25 ಮಂದಿ ಶಾಸಕರನ್ನ ನಿಗಮ ಮಂಡಳಿಗೆ ನೇಮಿಸುವ ಬಗ್ಗೆ‌ ಸಿಎಂ ಒಲವು ತೋರಿದ್ರೆ, ಕಾರ್ಯಕರ್ತರನ್ನ ಬಿಟ್ಟರೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಕಾರ್ಯಕರ್ತರಿಗೂ ಅವಕಾಶ ಕೊಡಬೇಕು ಎಂಬುದು ಡಿಕೆಶಿ ಆಗ್ರಹವಾಗಿದೆ. 

ಇದನ್ನೂ ವೀಕ್ಷಿಸಿ:  ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

Video Top Stories