ಕರುನಾಡ ಯುದ್ಧವೀರರ ಮುಂದೆ ಟಾರ್ಗೆಟ್ 7 ಚಾಲೆಂಜ್: ದಕ್ಷಿಣಾಪಥೇಶ್ವರರ ದಂಡಯಾತ್ರೆಗೆ ರೆಡಿಯಾಗಿದೆ ರಣವ್ಯೂಹ !

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಆಟಕ್ಕೆ ರೆಡಿಯಾಗ್ತಿದ್ದಾರೆ. ಕರ್ನಾಟಕ ಗೆದ್ದ ಜೋಡೆತ್ತು ಜೋಡಿ, ಮಹಾಸಾಹಸವೊಂದಕ್ಕೆ ರೆಡಿಯಾಗ್ತಿದೆ. 

First Published May 22, 2023, 10:39 AM IST | Last Updated May 22, 2023, 10:39 AM IST

ಕರ್ನಾಟಕ ಗೆದ್ದ ಭಲೇ ಜೋಡಿಯ ಮುಂದೆ ಮತ್ತೊಂದು ಚಾಲೆಂಜ್. ಇದು ಜೋಡೆತ್ತು ಜೋಡಿಯ ಮುಂದಿರೋ 7 ಟಾರ್ಗೆಟ್. ಕರ್ನಾಟಕ ಕುರುಕ್ಷೇತ್ರದಲ್ಲಿ ಉತ್ತರಾಪಥೇಶ್ವರರನ್ನು ಕಟ್ಟಿ ಹಾಕಿ ಕಾಂಗ್ರೆಸ್'ಗೆ ಪ್ರಚಂಡ ವಿಜಯ ತಂದುಕೊಟ್ಟ ದಕ್ಷಿಣದ ಭಲೇ ಜೋಡಿ ದಕ್ಷಿಣ ದಂಡಯಾತ್ರೆಗೆ ರೆಡಿಯಾಗ್ತಾ ಇದೆ. 7ರ ಸವಾಲು ಬೆನ್ನಟ್ಟಿ ದಂಡಯಾತ್ರೆ ಹೊರಡಲಿದೆ ಕುರುಕ್ಷೇತ್ರದಲ್ಲಿ ಚರಿತ್ರೆ ಸೃಷ್ಠಿಸಿದ ಸಿದ್ದು-ಡಿಕೆ ಯಶೋ ಜೋಡಿ. ಕಾಂಗ್ರೆಸ್ ನೊಗ ಎಳೆದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್, ಕೈ ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಿದ್ದಾರೆ. ಅದಕ್ಕೆ ಸಿಕ್ಕ ಬಳುವಳಿ ಎಂಬಂತೆ ಸಿದ್ದು ಮುಖ್ಯಮಂತ್ರಿ ಪಟ್ಟದಲ್ಲಿ ವಿರಾಜಮಾನರಾಗಿದ್ರೆ, ಡಿಕೆಶಿ ಡಿಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ.

ಇದನ್ನೂ ವೀಕ್ಷಿಸಿ: ಸಿದ್ದು ಡಿಕೆಶಿ ಸರ್ಕಾರದ ಮುಂದೆ ಸಾಲು-ಸಾಲು ಸವಾಲ್‌: ಕೊಟ್ಟಿರೋ ಗ್ಯಾರೆಂಟಿ ಪೂರೈಸೋಕೆ ಏನಿದೆ ಮಾರ್ಗ ?

Video Top Stories