Asianet Suvarna News Asianet Suvarna News

News Hour With B Y Vijayendra: ಬಿಎಸ್‌ವೈ ಹೆಸರಲ್ಲಿ ವಿಜಯೇಂದ್ರ ರಾಜಕಾರಣ? ಶಿಕಾರಿಪುರದಿಂದಲೇ ಕಣಕ್ಕೆ?

News Hour Special with B Y Vijayendra: ವಿಜಯೇಂದ್ರ ಅವರದ್ದು ಹಣ ಬಲ, ಜಾತಿ ಬಲ ರಾಜಕಾರಣ ಎಂಬ ಆರೋಪಗಳು ಕೇಳಿಬಂದಿದೆ. ಬಿಎಸ್‌ವೈ ಬಿಟ್ರೆ ವಿಜಯೇಂದ್ರ ಏನು? ಎಂಬ ಪ್ರಶ್ನೆ ಹಲವರು ಕೇಳ್ತಾರೆ. ಈ ಎಲ್ಲ ಪ್ರಶ್ನೆಗಳು, ಆರೋಪಗಳ ಬಗ್ಗೆ ಬಿ ವೈ ಬಿಜಯೇಂದ್ರ ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ  ಉತ್ತರಿಸಿದ್ದಾರೆ. 

ಬೆಂಗಳೂರು (ಅ. 27): ಬಿ ವೈ ವಿಜಯೇಂದ್ರ...(B Y Vijayendra) ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ (B S Yediyurappa) ಸುಪುತ್ರ, ಬಿಜೆಪಿ ಪಾಲಿಗೆ ಬೈ ಎಲೆಕ್ಶನ್‌ ಎಕ್ಸಪರ್ಟ್‌ ಎಂದು ಕರೆಸಿಕೊಳ್ಳುವ ನಾಯಕ. ಮಂಡ್ಯದ ಕೆ ಆರ್‌ ಪೇಟೆಯಂತಹ ಜೆಡಿಎಸ್‌ ಭದ್ರಕೋಟೆಯಲ್ಲೇ ಕಮಲ ಅರಳಸಿದವ್ರು. 2013ರಲ್ಲಿ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಕಣಕ್ಕೀಳಿದೆಬಿಟ್ರು ಅನ್ನೊ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇಲ್ಲಿಯವರೆಗು ಸಾಧ್ಯವಾಗಿಲ್ಲ. ಒಂದು ಕಾಲು ವರ್ಷದ ಹಿಂದೆ ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಾಗಿನಿಂದಲೂ ವಿಜಯೇಂದ್ರಗೆ ಸ್ಥಾನಮಾನ ಕೊಡಬೇಕು, ಕೊಡಬಾರದು ಎಂಬ ಬಗ್ಗೆ ಬಿಜೆಯಲ್ಲಿ ಚರ್ಚೆಗಳು ನಡೆಯುತ್ತಿವೆ.

ತೀರಾ ಇತ್ತೀಚೆಗೆ ರಾಜ್ಯ ಕೋರ್‌ ಕಮಿಟಿ ಬಿ ವೈ ವಿಜಯೇಂದ್ರ ಅವರನ್ನ ಎಂಎಲ್‌ಸಿ ಮಾಡಲು ಹೆಸರು ಕೂಡ ಶಿಫಾರಸ್ಸು ಮಾಡಿತ್ತು. ಆದರೆ ಹೈಕಮಾಂಡ್‌ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಇತ್ತಿಚೇಗಷ್ಟೇ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಶಿಕಾರಿಪುರದಿಂದ (Shikaripura) ಬಿ ವೈ ವಿಜಯೇಂದ್ರ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಘೋಷಣೆ  ಮಾಡಿದ್ರು. ಯಡಿಯೂರಪ್ಪನವರ ಕ್ಷೇತ್ರವಾಗಿರುವ ಶಿಕಾರಿಪುರದಿಂದಲೇ ವಿಜಯೇಂದ್ರ ಮುಂಬರುವ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ಸಾಧ್ಯತೆ ಇದೆ.  

R Ashok: ರಣೋತ್ಸಾಹದಲ್ಲಿರೋ ಕಾಂಗ್ರೆಸ್ ಕುದುರೆಯನ್ನ ಕಟ್ಟಿ ಹಾಕುತ್ತಾ ಕೇಸರಿ ಪಡೆ? 

ಬಿ ವೈ ವಿಜಯೇಂದ್ರ ಸಕ್ರಿಯ ರಾಜಕಾರಣಕ್ಕೀಳಿದು 7-8 ವರ್ಷಗಳಾಗಿವೆ. ಬಿಎಸ್‌ ಯಡಿಯೂರಪ್ಪ ಹೆಸರಲ್ಲೇ ರಾಜಕಾರಣ ಮಾಡ್ತಾರೆ ಎಂಬ ಆರೋಪವೂ ಇದೆ. ಬಿಎಸ್‌ವೈ ಸಿಎಂ ಆಗಿದ್ದಾಗೆ ವಿಜಯೇಂದ್ರ ಸೂಪರ್‌ ಸಿಎಂ ಆಗಿದ್ರು ಎಂಬ ಆರೋಪಗಳೂ ಇವೆ. ತಂದೆಯ ಪ್ರಭಾವ ಬಳಸಿಕೊಂಡು ಪಕ್ಷದಲ್ಲಿ, ಸರ್ಕಾರದಲ್ಲಿ ಸ್ಥಾನ ಪಡೆಯಲು ವಿಜಯೇಂದ್ರ ಯತ್ನಿಸುತ್ತಿದ್ದಾರೆ ಎಂಬ ಆರೋಪವು ಇದೆ. ವಿಜಯೇಂದ್ರ ಅವರದ್ದು ಹಣ ಬಲ, ಜಾತಿ ಬಲ ರಾಜಕಾರಣ ಎಂಬ ಆರೋಪಗಳೂ ಕೇಳಿಬಂದಿದೆ. ಬಿಎಸ್‌ವೈ ಬಿಟ್ರೆ ವಿಜಯೇಂದ್ರ ಏನು? ಎಂಬ ಪ್ರಶ್ನೆ ಹಲವರು ಕೇಳ್ತಾರೆ. 
ಈ ಎಲ್ಲ ಪ್ರಶ್ನೆಗಳು, ಆರೋಪಗಳ ಬಗ್ಗೆ ಬಿ ವೈ ಬಿಜಯೇಂದ್ರ ಏಷ್ಯಾನೆಟ್‌ ಸುವರ್ಣ ನ್ಯೂಸಿನ ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ (News Hour Special) ಉತ್ತರಿಸಿದ್ದಾರೆ.