R Ashok News Hour Special: ಯಾವ ಕಾರಣಕ್ಕೆ ಬಿಜೆಪಿಗೆ ಮತ ಹಾಕಬೇಕು ಮತದಾರ? ಬಡವರ ಮನೆ ಒಡೆದು, ಶ್ರೀಮಂತರಿಗೆ ಹೆದರಿತಾ ಸರ್ಕಾರ? ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಕಂದಾಯ ಸಚಿವ ಆರ್‌ ಆಶೋಕ್‌ ಉತ್ತರಿಸಿದ್ದಾರೆ

ಬೆಂಗಳೂರು (ಅ. 19): ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣಾಗೆ (Assembly Elections 2023) ರಾಜಕೀಯ ಪಕ್ಷಗಳು ಈಗಾಗಲೇ ರಣಕಹಳೆ ಮೊಳಗಿಸಿವೆ. ಚುನಾವಣೆಯ ಕಾವು ಜೋರಾಗಿದ್ದು ಪ್ರಮುಖ ಮೂರು ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸಿವೆ. ಜನಸಂಕಲ್ಪ ಯಾತ್ರೆ ಮೂಲಕ ಬಿಜೆಪಿ (BJP) ಮತಬೇಟೆ ಶುರು ಮಾಡಿದ್ರೆ, ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ (Congress) ಅಖಾಡಕ್ಕಿಳಿದಿದೆ. ಇತ್ತ ಜೆಡಿಎಸ್ (JDS) ಜನತಾ ಮಿತ್ರ ಮೂಲಕ ಚುನಾವಣಾ ರಣಕಹಳೆ ಊದಿದ್ದು, ನವೆಂಬರ್‌ 1 ರಿಂದ ಪಂಚರತ್ನ ಯಾತ್ರೆ ಶುರು ಮಾಡಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಾರದ ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ ರಣೋತ್ಸಾಹದಲ್ಲಿರೋ ಕಾಂಗ್ರೆಸ್ ಕುದುರೆಯನ್ನ ಕಟ್ಟಿ ಹಾಕುತ್ತಾ ಕೇಸರಿ ಪಡೆ? ಯಾವ ಕಾರಣಕ್ಕೆ ಬಿಜೆಪಿಗೆ ಮತ ಹಾಕಬೇಕು ಮತದಾರ? ಬಡವರ ಮನೆ ಒಡೆದು, ಶ್ರೀಮಂತರಿಗೆ ಹೆದರಿತಾ ಸರ್ಕಾರ? ಬೆಂಗಳೂರು ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೈಗೊಂಡ ಕ್ರಮಗಳೇನು? ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಬಿಜೆಪಿ ನಾಯಕ ಹಾಗೂ ಕಂದಾಯ ಸಚಿವ ಆರ್‌ ಆಶೋಕ್‌ ಉತ್ತರಿಸಿದ್ದಾರೆ. 

ರಾಯಚೂರು: ಅರಕೇರಾದಲ್ಲಿ ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ, ಕುಂಭ, ಕಳಸ ಹೊತ್ತ ಮಹಿಳೆಯರಿಂದ ಸ್ವಾಗತ