ಪ್ರತಿಪಕ್ಷ ನಾಯಕರ ರೇಸ್‌ನಲ್ಲಿದ್ದವರಿಗೆ ಬಿಗ್ ಶಾಕ್: ವೀಕ್ಷಕರ ವರದಿ ಬಳಿಕ ಆಯ್ಕೆ, ಯಾರಾಗ್ತಾರೆ ನಾಯಕ ?
ಕ್ಲೈಮ್ಯಾಕ್ಸ್ ಹಂತ ತಲುಪಿದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು..!
ವಿಪಕ್ಷ ನಾಯಕನ ಆಯ್ಕೆ ಜವಾಬ್ದಾರಿ ಹೊತ್ತ ರಾಜಾಹುಲಿ ಬಿಎಸ್ವೈ..!
ವಿಪಕ್ಷ ನಾಯಕರ ಮುಂದಿರುವ ಭಾರೀ ಸವಾಲುಗಳು ಏನೇನು..?
ಸದನದಲ್ಲಿ ಸಿದ್ದು ಪಡೆ ಎದುರಿಸಲು ಬಿಜೆಪಿಗೆ ಸಾರಥಿಯೇ ಸಿಕ್ಕಿಲ್ಲ. 50 ದಿನಗಳು ಕಳೆದ್ರೂ ವಿಪಕ್ಷ ನಾಯಕರ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಸಿದ್ದು ಸರ್ಕಾರವನ್ನು ಕಟ್ಟಿ ಹಾಕುವ ಪ್ರಭಲ ಸಾರಥಿಯನ್ನು ಆಯ್ಕೆ ಮಾಡೋದು ಬಿಜೆಪಿ ಹೈ ಕಮಾಂಡ್‌ಗೆ ದೊಡ್ಡ ಸವಾಲಾಗಿತ್ತು. ಅದ್ರಂತೆ ವಿಪಕ್ಷ ನಾಯಕರ ಹುಡುಕಾಟದಲ್ಲಿದ್ದ ಬಿಜೆಪಿ ಹೈಕಾಮಾಂಡ್ ತಲೆ ಕೆಡಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಹೈ ವೋಲ್ಟೆಜ್ ಮೀಟಿಂಗ್‌ನಲ್ಲಿ ರಾಜಾಹುಲಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ ಬಳಿಕ ವಿಪಕ್ಷ ನಾಯಕರ ಆಯ್ಕೆ ಆಗಲಿದೆ ಎನ್ನಲಾಗ್ತಿತ್ತು. ಆದ್ರೆ ಇಂದು ರಾಜ್ಯಕ್ಕೆ ವೀಕ್ಷಕರು ಬರಲಿದ್ದು, ಅವರು ಬಂದ ಬಳಿಕ ವರದಿ ನೋಡಿ ಪ್ರತಿಪಕ್ಷ ನಾಯಕನ ಆಯ್ಕೆ ಆಗಲಿದೆ. ಮಾಜಿ ಸಿಎಂ ಬೊಮ್ಮಾಯಿ ಅವರೇ ವಿಧಾನಸಭೆಯ ವಿಪಕ್ಷ ನಾಯಕರಾಗ್ತಾರೋ? ಅಥವಾ ಅಚ್ಚರಿ ಪ್ರಯೋಗವನ್ನು ಹೈಕಮಾಂಡ್ ಕೈಗೊಳ್ಳಲಿದೆಯೋ ಎಂಬ ಕುತೂಹಲ ಇನ್ನೂ ಇದೆ. ವಿಪಕ್ಷ ಲೀಡರ್ ಸ್ಥಾನದಲ್ಲಿ ಕೂರಲು ಕೇಸರಿ ಪಡೆಯಲ್ಲಿ ರೇಸ್ ನಡೆಯುತ್ತಿದ್ದರೂ ಲೋಕಸಭೆ ಚುನಾವಣೆ ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯನ್ನ ಗಮನದಲ್ಲಿ ಇಟ್ಟುಕೊಂಡು, ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನ ಹುಡುಕಾಟ ನಡೆಸಿ ವಿಪಕ್ಷ ನಾಯಕ ಯಾರಾಗ್ಬೇಕು ಅನ್ನೋ ನಿರ್ಧಾರವನ್ನ ಬಿಜೆಪಿ ಅಳೆದು ತೂಗಿ ಮಾಡಲಿದೆ.
ಇದನ್ನೂ ವೀಕ್ಷಿಸಿ: ಶಿವರಾಮ್ ಹೆಬ್ಬಾರ್, ಸುನಿಲ್ ನಾಯ್ಕ್‌ಗೆ ಸಂಕಷ್ಟ: ಆರೋಪ ಸಾಬೀತಾದ್ರೆ 6 ವರ್ಷ ಚುನಾವಣಾ ಸ್ಪರ್ಧೆಗೆ ನಿರ್ಬಂಧ ?