ಹೊರ ಬಿತ್ತು ಮತ್ತೊಂದು ಸಮೀಕ್ಷೆ..ಮೋದಿಗೆ ಮತ್ತೆ ರಾಜ ಸಿಂಹಾಸನ..!

ಹ್ಯಾಟ್ರಿಕ್ ಬಾರಿಸಲಿದ್ದಾರೆ ಸೋಲಿಲ್ಲದ ಸರದಾರ ಮೋದಿ..!
ನಿಜವಾಗಲಿದೆ ಕೆಂಪುಕೋಟೆಯಲ್ಲಿ ಮೋದಿ ಮಾಡಿದ್ದ ಶಪಥ..!
ಪ್ರಧಾನಿ ಮೋದಿ ಜಗ ಮೆಚ್ಚಿದ ನಾಯಕ ಎನ್'ಡಿಎ ತ್ರಿಶತಕ..!

Share this Video
  • FB
  • Linkdin
  • Whatsapp

ಮೋದಿ ಚುನಾವಣಾ ಚದುರಂಗದ ಮಾಸ್ಟರ್'ಪೀಸ್. ಸತತ ಎರಡು ಲೋಕಸಭಾ(Loksabha) ಚುನಾವಣೆಗಳನ್ನು ಗೆದ್ದು ಚರಿತ್ರೆ ಸೃಷ್ಠಿಸಿದವರು. ಅಷ್ಟೇ ಯಾಕೆ ? ಈ ಕ್ಷಣ ಲೋಕಸಭಾ ಚುನಾವಣೆ ಏನಾದ್ರೂ ನಡೆದ್ರೆ, ಮತ್ತೆ ಮೋದಿಯೇ(Modi) ವಿಜೃಂಭಿಸಲಿದ್ದಾರೆ.. ಇದು ನಾವು ಹೇಳ್ತಿರೋ ಮಾತಲ್ಲ, ಸಮೀಕ್ಷೆ ಬಿಚ್ಚಿಟ್ಟಿರೋ ಸತ್ಯ. ಮೊನ್ನೆ ಆಗಸ್ಟ್ 15ರಂದು ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತಾಡ್ತಾ ಶಪಥವೊದನ್ನು ಮಾಡಿದ್ರು. ಎರಡು ಬಾರಿ ದೇಶದ ಜನ ನಂಗೆ ಆಶೀರ್ವಾದ ಮಾಡಿದ್ದಾರೆ. ಮತ್ತೊಮ್ಮೆ ನಾನೇ ಇದೇ ಜಾಗದಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸ್ತೀನಿ ಅಂತ ಮೋದಿ ದೃಢ ವಿಶ್ವಾಸದಿಂದ ಹೇಳಿದ್ರು. ಮೋದಿಯವರ ಶಪಥ ನಿಜವಾಗಲಿದೆ ಅಂತಿದೆ ಈಗ ಹೊರ ಬಿದ್ದಿರೋ ಲೋಕಸಭಾ ಚುನಾವಣಾ ಸಮೀಕ್ಷೆ. ರಾಷ್ಟ್ರೀಯ ಸುದ್ದಿವಾಹಿನಿ ಟೈಮ್ಸ್ ನೌ (Times Now survey) ಮತ್ತು ಇಟಿಜಿ ಸಂಸ್ಥೆ(ETG Institute) ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ ಹೇಳಲಾಗಿದೆ. ಈ ಕ್ಷಣ ಏನಾದ್ರೂ ಲೋಕಸಭಾ ಚುನಾವಣೆ ನಡೆದ್ರೆ ಮೋದಿ ಸಾರಥ್ಯದ ಎನ್'ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಸತ 3ನೇ ಬಾರಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ಹೇಳಿದೆ. ಇಂಡಿಯಾ(I.N.D.I.A) ಈ ಹೆಸರಲ್ಲಿ 26 ವಿರೋಧ ಪಕ್ಷಗಳು ಒಂದಾಗಿ ಮೋದಿ ವಿರುದ್ಧ ಮಹಾಮೈತ್ರಿಕೂಟ ರಚಿಸಿ ಲೋಕಸಂಗ್ರಾಮಕ್ಕೆ ರಣಕಹಳೆ ಮೊಳಗಿಸಿ ಬಿಟ್ಟಿವೆ. ಆದ್ರೆ ಎಷ್ಟೇ ಪಕ್ಷಗಳು ಒಂದಾದ್ರೂ, ನಾಯಕರ ಮಹಾಸಂಗಮವಾದ್ರೂ ಮೋದಿ ನಾಗಾಲೋಟವನ್ನು ತಡೆಯಲು ಯಾರಿಂದ್ಲೂ ಸಾಧ್ಯವಿಲ್ಲ ಅಂತ ಗೃಹ ಸಚಿವ ಅಮಿತ್ ಶಾ, ಮೊನ್ನೆ ಮೊನ್ನೆಯಷ್ಟೇ ಲೋಕಸಭೆಯಲ್ಲೇ ಅಬ್ಬರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ತೆಲಂಗಾಣ, ಆಂಧ್ರದಲ್ಲಿ ಮೆತ್ತಗಾದ ಬಿಜೆಪಿ: ಇಬ್ಬರು ನಾಯಕರ ನಡುವೆ ಮೈತ್ರಿ ಮಾತುಕತೆ..?

Related Video