Asianet Suvarna News Asianet Suvarna News

ತೆಲಂಗಾಣ, ಆಂಧ್ರದಲ್ಲಿ ಮೆತ್ತಗಾದ ಬಿಜೆಪಿ: ಇಬ್ಬರು ನಾಯಕರ ನಡುವೆ ಮೈತ್ರಿ ಮಾತುಕತೆ..?

ಕೆಸಿಆರ್ ಜೊತೆಗೆ ಒಳ್ಳೆ ಸಂಬಂಧ ಇರುವ ಕಿಶನ್ ರೆಡ್ಡಿಗೆ ಅಧ್ಯಕ್ಷ ಸ್ಥಾನ 
ಕಾಂಗ್ರೆಸ್ ಚೇತರಿಕೆ ಎಂದು ಸರ್ವೆ ಹೇಳಿದ್ದಕ್ಕೆ ಗೇಮ್ ಪ್ಲಾನ್ ಚೇಂಜ್
ಇಬ್ಬರ ಜಗಳದಲ್ಲಿ ಕಾಂಗ್ರೆಸ್ ಗೆಲ್ಲೋದು ಬೇಡ ಎಂಬ ಲೆಕ್ಕಾಚಾರ
 

ಹೈದರಾಬಾದ್‌ನಲ್ಲಿ ನಮ್ಮದೇ ಸರ್ಕಾರ ಎಂದವರಿಗೆ ಶಾಕ್ ನೀಡಲಾಗಿದೆ. ಅತಿಯಾದ ಆತ್ಮ ವಿಶ್ವಾಸದಲ್ಲಿದ್ದ ಬಿಜೆಪಿ(BJP) ಏಕ್ದಂ ಉಲ್ಟಾ ಹೊಡೆಯುತ್ತಿದೆ. ಅಮಿತ್ ಶಾ ಮತ್ತು ಕೆ ಸಿ ಆರ್ ಪುತ್ರ ರಾಮರಾವ್ ನಡುವೆ ಮಾತುಕತೆ ನಡೆದಿದೆ ಎನ್ನಲಾಗ್ತಿದೆ. ಕಾಂಗ್ರೆಸ್(Congress) ಮಣಿಸಲು ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಚುನಾವಣೆ ಹೊಸ್ತಿಲಲ್ಲಿ ಆಂಧ್ರದಲ್ಲೂ ಬಿಜೆಪಿ ಮೆತ್ತಗಾಗಿದೆ. ಆಂಧ್ರದಲ್ಲಿ ಚಂದ್ರಬಾಬು ಬದಲು ಜಗನ್‌ ಮೋಹನ್‌ ರೆಡ್ಡಿ(Jagan Mohan Reddy) ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎನ್ನಲಾಗ್ತಿದೆ. ಕಾಂಗ್ರೆಸ್ ಸೋಲಿಸಲು ಎಲ್ಲಾ ಸಾಧ್ಯ ಸಾಧ್ಯತೆಗೆ ಅಮಿತ್‌ ಶಾ ಮೊರೆ ಹೋಗಿದ್ದಾರೆ. ತೆಲಂಗಾಣದಲ್ಲಿ ಕೆಸಿಆರ್ ಜೊತೆಗೆ ಒಳ್ಳೆ ಸಂಬಂಧ ಹೊಂದಿರುವ ಕಿಶನ್ ರೆಡ್ಡಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರು ಉತ್ತರಕ್ಕೆ ಬರ್ತಾರಾ ಡಿ.ಕೆ ಸುರೇಶ್..? ಶಾಸಕರ ಘರ್ ವಾಪ್ಸಿ ಹಿಂದೆ ಡಿಕೆ ಬ್ರದರ್ಸ್ ಮಾಸ್ಟರ್ ಪ್ಲಾನ್..?

Video Top Stories