ದೆಹಲಿಯಲ್ಲಿಂದು ಹೈವೋಲ್ಟೇಜ್ ಸಭೆ: ನಿತೀಶ್ ಕುಮಾರ್ , ಚಂದ್ರಬಾಬು ನಾಯ್ಡು ಮೀಟಿಂಗ್‌ನಲ್ಲಿ ಭಾಗಿ
ಸಂಜೆ 4 ಗಂಟೆಗೆ ಎನ್‌ಡಿಎ ನಾಯಕರ ಸಭೆ ನಡೆಯಲಿದ್ದು, ನಿತೀಶ್ ಕುಮಾರ್ , ಚಂದ್ರಬಾಬು ನಾಯ್ಡು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿಂದು(Delhi) ಹೈವೋಲ್ಟೇಜ್ ಸಭೆ ನಡೆಯಲಿದೆ. ನಿತೀಶ್ ಕುಮಾರ್(Nitish Kumar) , ಚಂದ್ರಬಾಬು ನಾಯ್ಡು(Chandrababu Naidu) ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿಗೆ(BJP) ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸಂಪುಟ ರಚನೆ ಬಗ್ಗೆಯೂ ಇಂದು ಎನ್‌ಡಿಎ ನಾಯಕರು ಸಭೆ(NDA Meeting) ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಎನ್‌ಡಿಎ ನಾಯಕರ ಸಭೆ ನಡೆಯಲಿದೆ. ಎನ್‌ಡಿಎ ಮಿತ್ರ ಪಕ್ಷಗಳು ಸಭೆಯಲ್ಲಿ ಭಾಗಿಯಾಗಲಿವೆ. 1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಪಕ್ಷ ಬಿಜೆಪಿ ಆಗಲಿದೆ. ಇಂದು ಎನ್‌ಡಿಎ , ಇಂಡಿಯಾ ನಾಯಕರು ಸಭೆ ನಡೆಸಲಿದ್ದು, ಸರ್ಕಾರ ರಚನೆಗೆ NDA ,INDIA ಮಿತ್ರ ಪಕ್ಷಗಳ ಮೊರೆ ಹೋಗಿವೆ. ದೇಶದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಸಮೀಕ್ಷೆ ಉಲ್ಟಾಪಲ್ಟಾ..ಹೊರಬಿತ್ತು ಅಚ್ಚರಿ ರಿಸಲ್ಟ್! ನಿತೀಶ್ ಕುಮಾರ್, ನಾಯ್ಡುಗೆ INDIA ಮೈತ್ರಿ ಗಾಳ!