ಸಮೀಕ್ಷೆ ಉಲ್ಟಾಪಲ್ಟಾ..ಹೊರಬಿತ್ತು ಅಚ್ಚರಿ ರಿಸಲ್ಟ್! ನಿತೀಶ್ ಕುಮಾರ್, ನಾಯ್ಡುಗೆ INDIA ಮೈತ್ರಿ ಗಾಳ!

ಮೂರನೇ ಭಾರಿ ಸರ್ಕಾರ ರಚಿಸಲು ಸಜ್ಜಾದ ಮೋದಿ
ಸತತ ಮೂರನೇ ಭಾರಿ ಪ್ರಧಾನಿಯಾಗಲಿರುವ ನಮೋ
ಲೋಕ ಅಖಾಡದಲ್ಲಿ ವರ್ಕೌಟ್ ಆದ ಕಾಂಗ್ರೆಸ್ ಗ್ಯಾರಂಟಿ

Share this Video
  • FB
  • Linkdin
  • Whatsapp

‘ಚಾರ್ ಸೋ ಪಾರ್’ ಎಂದಿದ್ದ ಬಿಜೆಪಿಗೆ(BJP) ಬರಸಿಡಿಲು ಬಡಿದಂತಾಗಿದೆ. ಸಮೀಕ್ಷೆಗಳೆಲ್ಲಾ ಉಲ್ಟಾಪಲ್ಟಾವಾಗಿದ್ದು, ಅಚ್ಚರಿ ಫಲಿತಾಂಶ ಹೊರಬಂದಿದೆ. ಸ್ಪಷ್ಟ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi),ಅಮಿತ್ ಶಾ(Amit Shah) ಮೈತ್ರಿ ಪಕ್ಷಗಳ ಮೊರೆ ಹೋಗಿದ್ದಾರೆ. ಇಂದು ಮೈತ್ರಿ ಕೂಟದ ನಾಯಕರ ಸಭೆಯನ್ನು ಅಮಿತ್‌ ಶಾ ಕರೆದಿದ್ದಾರೆ. ನಿತೀಶ್ ಕುಮಾರ್, ನಾಯ್ಡುಗೆ INDIA ಮೈತ್ರಿ ಕೂಡ ಗಾಳ ಹಾಕುತ್ತಿದೆ. ಕಳೆದ ಭಾರಿಗಿಂತ ಕಡಿಮೆ ಅಂಕಿಗೆ ಕಮಲ ಪಡೆ ಕುಸಿದಿದೆ. 2019ರಲ್ಲಿ 303, ಈ ಬಾರಿ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿ 63 ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡತಾಗಿದೆ. ಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಇದನ್ನೂ ವೀಕ್ಷಿಸಿ:  ಜನ ನಿರೀಕ್ಷೆಯಂತೆ ಕೈ ಹಿಡಿಲಿಲ್ಲ, ಆದ್ರೂ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡ್ತೀವಿ: ಪ್ರಿಯಾಂಕ್ ಖರ್ಗೆ

Related Video