Asianet Suvarna News Asianet Suvarna News

ಮೋದಿ ಭವಿಷ್ಯ ನಿಜವಾಗುತ್ತಾ..?: ಇಂಡಿಯಾ ಟುಡೆ-ಸಿಎನ್ಎಕ್ಸ್ ಸಮೀಕ್ಷೆ ಏನ್‌ ಹೇಳುತ್ತೆ?

ಲೋಕಸಭಾ ಚುನಾವಣೆ 2024ರಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
 

ನವದೆಹಲಿ: ಮುಂದಿನ ಬಾರಿಯೂ ನಾನೇ ಪ್ರಧಾನಿ ಎಂದು ನರೇಂದ್ರ ಮೋದಿ(Modi) ಹೇಳಿದ್ದರು. ವಾರದ ಹಿಂದಷ್ಟೇ ಈ ಬಗ್ಗೆ ಬಹಿರಂಗವಾಗಿ ಘೋಷಿಸಿದ್ದರು.ಇದರ ಬೆನ್ನಲ್ಲೇ ಕೆಲ ಸಮೀಕ್ಷೆಗಳು(Survey) ಮತ್ತೆ ಎನ್‌ಡಿಎ(NDA) ಅಧಿಕಾರಕ್ಕೆ ಬರುತ್ತೆ ಎನ್ನುತ್ತಿವೆ. ಇಂಡಿಯಾ ಟುಡೆ-ಸಿಎನ್ಎಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎಗೆ ಮತ್ತೆ ಅಧಿಕಾರ ದೊರೆಯಲಿದೆ. ಈ ಬಾರಿ ಎನ್‌ಡಿಎಗೆ 318 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳುತ್ತದೆ. ಹೊಸದಾಗಿ ರಚನೆಯಾಗಿರುವ I.N.D.I.A ಒಕ್ಕೂಟಕ್ಕೆ 175 ಸ್ಥಾನ, ತಟಸ್ಥವಾಗಿರುವ ಪಕ್ಷಗಳು 50 ಸ್ಥಾನ ಗೆಲ್ಲಲಿವೆ ಎಂದು ತಿಳಿದುಬಂದಿದೆ. ಇನ್ನೂ ಕರ್ನಾಟಕದಲ್ಲೂ ಬಿಜೆಪಿಗೆ(BJP) ಮುನ್ನಡೆಯಾಗಲಿದ್ದು, ರಾಜ್ಯದಲ್ಲಿ ಬಿಜೆಪಿ  20 ಸ್ಥಾನ ಗೆಲ್ಲಲಿದೆ. 7 ಸ್ಥಾನದಲ್ಲಿ ಕಾಂಗ್ರೆಸ್(Congress), ಒಂದು ಸ್ಥಾನದಲ್ಲಿ ಜೆಡಿಎಸ್‌ಗೆ ಗೆಲುವು ಆಗಲಿದೆ.

ಇದನ್ನೂ ವೀಕ್ಷಿಸಿ: ಒಕ್ಕಲಿಗ ನಾಯಕ ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಪಟ್ಟ ?: ಬೊಮ್ಮಾಯಿಗೆ ಒಲಿಯುತ್ತಾ ಪ್ರತಿಪಕ್ಷ ನಾಯಕ ಸ್ಥಾನ ?

Video Top Stories