ಒಕ್ಕಲಿಗ ನಾಯಕ ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಪಟ್ಟ ?: ಬೊಮ್ಮಾಯಿಗೆ ಒಲಿಯುತ್ತಾ ಪ್ರತಿಪಕ್ಷ ನಾಯಕ ಸ್ಥಾನ ?
ಯಡಿಯೂರಪ್ಪ ಭೇಟಿ ಮಾಡಿ ಆಶೀರ್ವಾದ ಕೋರಿಕೆ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್
ಆಗಸ್ಟ್ 2ಕ್ಕೆ ಸಿ.ಟಿ. ರವಿಗೆ ದೆಹಲಿಗೆ ಬರುವಂತೆ ಬುಲಾವ್
ಬೆಂಗಳೂರು: ರಾಷ್ಟ್ರೀಯ ಹುದ್ದೆಯಿಂದ ಸಿ.ಟಿ.ರವಿ(CT Ravi) ಅವರನ್ನು ಇಳಿಸಲಾಗಿದ್ದು, ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕೊಡ್ತಾರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಆಗಸ್ಟ್ 2ಕ್ಕೆ ದೆಹಲಿಗೆ (Delhi) ಬರುವಂತೆ ಸಿ.ಟಿ. ರವಿಗೆ ಹೈಕಮಾಂಡ್ ಬುಲಾವ್ ಸಹ ನೀಡಿದೆ. ಹಾಗಾಗಿ ಒಕ್ಕಲಿಗ ನಾಯಕ ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಪಟ್ಟ(State president) ಕಟ್ಟೋದು ಪಕ್ಕ ಎನ್ನಲಾಗ್ತಿದೆ. ಲಿಂಗಾಯತರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿ, ಒಕ್ಕಲಿಗರಿಗೆ ರಾಜಾಧ್ಯಕ್ಷ ಪಟ್ಟ ನೀಡಬಹುದು ಎನ್ನಲಾಗ್ತಿದೆ. ಬಿಎಸ್‌ವೈ ಆಪ್ತ ಬೊಮ್ಮಾಯಿಗೆ ಪ್ರತಿಪಕ್ಷ ನಾಯಕ(opposition leader) ಸ್ಥಾನ ಒಲಿಯುತ್ತಾ ಎಂಬ ಅನುಮಾನ ಸಹ ಇದೀಗ ಕಾಡಿದೆ. ಸಿ.ಟಿ.ರವಿಗೆ ಪಟ್ಟ ಕಟ್ಟುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸುವೆ ಎಂದು ಸಿ.ಟಿ. ರವಿ ಹೇಳುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ನೀರಿನಲ್ಲಿ ಕೊಚ್ಚಿಹೋಗಿದ್ದ ಶರತ್ ಮೃತದೇಹ ಪತ್ತೆ: ಜಲಸಮಾಧಿಯಾದ ಮಗ..ಪೋಷಕರ ಆಕ್ರಂದನ