ಮೋದಿ ನಾಲಾಯಕ್! ಮಲ್ಲಿಕಾರ್ಜುನ ಖರ್ಗೆ ಬೆನ್ನಲ್ಲೇ ವಿವಾದ ಸೃಷ್ಟಿಸಿದ ಮಗನ ಹೇಳಿಕೆ!
ಶಾಸಕ ಪ್ರಿಯಾಂಕ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ನಾಲಾಯಕ್' ಎಂದು ಮೂದಲಿಸುವ ಮೂಲಕ ಮತ್ತೊಂದು ವಿವಾದವನ್ನು ಖರ್ಗೆ ಕುಟುಂಬದ ಮೈಮೇಲೆ ಎಳೆದುಕೊಂಡಿದ್ದಾರೆ.
ಕಲಬುರಗಿ (ಮೇ 1): ಈಗಾಗಲೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ವಿಷ ಸರ್ಪ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಅವರ ಪುತ್ರ ಶಾಸಕ ಪ್ರಿಯಾಂಕ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ನಾಲಾಯಕ್' ಎಂದು ಮೂದಲಿಸುವ ಮೂಲಕ ಮತ್ತೊಂದು ವಿವಾದವನ್ನು ಖರ್ಗೆ ಕುಟುಂಬದ ಮೈಮೇಲೆ ಎಳೆದುಕೊಂಡಿದ್ದಾರೆ.
ಈಗಾಗಲೇ ದೇಶದ ಪ್ರಧಾನಮಂತ್ರಿಗೆ ಅಪ್ಪ ವಿಷ ಸರ್ಪ ಎಮದು ಹೇಳಿದರೆ, ಈಗ ಮಗ ನಾಲಾಯಕ್ ಎಂದು ಹೇಳಿಕೆ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಶಾಸಕ ಪ್ರಿಯಾಂಕ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮೋದಿಯ ವಿರುದ್ಧ ಹರಿಹಾಯ್ದಿದ್ದಾರೆ. ಇತ್ತೀಚೆಗೆ ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದವರಿಗೆ ಏನು ಹೇಳಿದ್ದರು? ಬಂಜಾರಾ ಸಮಾಜದ ಜನರ ಮಗ ದೆಹಲಿಯಲ್ಲಿದ್ದಾನೆ ಅಂತ ಮೋದಿ ಹೇಳಿದ್ದರು. ಆದರೆ, ಇಂತಹ ನಾಲಾಯಕ್ ಮಗನಿದ್ದರೆ ಹೇಗೆ ಜೀವನ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ. ಮನೆಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ. ಆದರೆ, ಸುದ್ದಿಗೋಷ್ಠಿಯ ಕೊನೆಗೆ ನಾನು ಮೋದಿಗೆ ಹಾಗೆ ಅಂದಿಲ್ಲ. ನನಗೆ ವಯಕ್ತಿಕ ನಿಂದನೆಗಿಂತ ಅವರಿಂದ ಕೆಲವು ಪ್ರಶ್ನೆಗೆ ಉತ್ತರ ಮುಖ್ಯ ಎಂದು ಸಮಜಾಯಿಸಿ ನೀಡಲು ಯತ್ನಿಸಿದರು.