ಸಿ.ಟಿ.ರವಿ ತಮ್ಮ ಪಂಚೆ ಸರಿಮಾಡಿಕೊಳ್ಳಲಿ, ನಮ್ಮದನ್ನು ಯಾರೂ ಸರಿ ಮಾಡೋದು ಬೇಡ: ಚಲುವರಾಯಸ್ವಾಮಿ

ಮೊದಲು ಸಿ.ಟಿ. ರವಿ ತಮ್ಮ ಪಂಚೆ ಸರಿಮಾಡಿಕೊಳ್ಳಲಿ. ನಮ್ಮ ಪಂಚೆಯನ್ನು ಯಾರೂ ಸರಿ ಮಾಡೋದು ಬೇಡ. ಮನಸ್ಸಿಗೆ ಬಂದಂತೆ ಮಾತನಾಡಿದವರನ್ನು ಜನರು ಮಲಗಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಮೈಸೂರು: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪಂಚೆ ರಾಜಕೀಯ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಪಂಚೆ ಬಗ್ಗೆ ಸಿಟಿ ರವಿ ಮಾತನಾಡಿದ್ದರು. ಇದಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಮೊದಲು ಸಿ.ಟಿ. ರವಿ ತಮ್ಮ ಪಂಚೆ ಸರಿಮಾಡಿಕೊಳ್ಳಲಿ. ನಮ್ಮ ಪಂಚೆಯನ್ನು ಯಾರೂ ಸರಿ ಮಾಡೋದು ಬೇಡ. ಮನಸ್ಸಿಗೆ ಬಂದಂತೆ ಮಾತನಾಡಿದ್ದಕ್ಕೆ ಜನ ಅವರನ್ನು ಮಲಗಿಸಿದ್ದಾರೆ ಎಂದು ಹೇಳುವ ಮೂಲಕ ಸಿಟಿ ರವಿಗೆ ಚಲುವರಾಯಸ್ವಾಮಿ ಟಾಂಗ್‌ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಉತ್ತರವೇ ಅಂತಿಮ. 66 ಗೆದ್ದರೂ ಅವರಿಗೆ ಬುದ್ಧಿ ಬಂದಿಲ್ಲ. ಈಗಲೂ ಕಿತ್ತಾಡುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಏನು ಕಿತ್ತಾಡುತ್ತಿದ್ದಾರಾ ಎಂದು ಸಚಿವರು ಪ್ರಶ್ನೆ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಟೋಲ್‌ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ವೃದ್ದೆ: ನಾವು ಒಂದೇ ಕಡೆ 310 ರೂ. ಕಟ್ಟಿದ್ರೆ ಎಲ್ಲಿಗೆ ಹೋಗಬೇಕು ?

Related Video